ನಿಜವಾಗಿ ಅಮ್ಮನೆಂದರೇ ....
ತನಗೆ ತಾನೇ ಪ್ರಶ್ನೆ ಹಾಕಿಕೊಂಡು ಗಂಟೆಗಟ್ಟಲೆ,ದಿನಗಟ್ಟಲೆ ಯೋಚಿಸಿದರೂಆ ಅಭಿಪ್ರಾಯ ತಪ್ಪು....ಅವಳ ತಕ್ಕಡಿ ತನ್ನ ಅಭಿಪ್ರಾಯವನ್ನೇ ಮೇಲಿರಿಸಿತ್ತು.,ತನ್ನನ್ನು ತಾನು ಸಮರ್ಥಿಸಿಕೊಂಡಿದ್ದ ರೀತಿ ಅದು....ವಿಧಿಯೇ ಇರಲಿಲ್ಲ ಸಮರ್ಥನೆ ನೂರು ಪ್ರತಿಶತ ಸರಿಯೇ ಇದ್ದಿತ್ತು.......ಇಷ್ಟು ದಿನ ಅಮ್ಮನಾಸರೆಯ ಮುದ್ದು ಕೂಸಾಗಿ ಬೆಳೆದು,ಯಾರಿಂದಲೋ ಆಕೆ ತನ್ನ ನಿಜವಾದ ಅಮ್ಮನಲ್ಲವೆಂದು ತಿಳಿದಾಗ ಆದ ಸಂಕಟ ಹೇಳುವಂತದ್ದಲ್ಲ..ತನಗೀಗ ವರ್ಷ ೧೫ ಬೆರಳೆಣಿಸಿದ್ದಳು ಶ್ರಾವಣೀ,ತೀರಾ ತಿಳುವಳಿಕೆ ಇಲ್ಲ ಎನ್ನುವ ವಯಸ್ಸೇನೂ ಅಲ್ಲ,. ಯೋಚಿಸುವ, ಅರ್ಥ ಮಾಡಿಕೊಳ್ಳುವ ಸಹಜ ಸ್ವಭಾವ ಅವಳಲ್ಲೂ ಬಂದಿತ್ತು .... ಅವಳುದರದಲ್ಲಿ ನವಮಾಸಗಳು ತನ್ನನ್ನು ಹುದುಗಿಸಿ ಕಾಪಾಡದಿದ್ದರೂ,ಹುಟ್ಟಿದ ಮರುಕ್ಷಣದಿಂದ ಈ ಕ್ಷಣದ ವರೆಗೂ ಕಂಡಿದ್ದು ಇವಳ ಪ್ರೀತಿಯನ್ನೇ,ತಿಂದಿದ್ದು ಇವಳ ಕೈ ತುತ್ತನ್ನೇ..'ಅಮ್ಮಾ ' ಎಂದು ಕರೆದದ್ದು ಇವಳನ್ನೇ....ಮಕ್ಕಳಿಲ್ಲದ ಆಕೆಯೂ ತನ್ನ ತಾಯ್ತನದ ಅಷ್ಟೂ ಹಾರೈಕೆಗಳನ್ನು ತೋರಿಸಿದ್ದಳು ಎಂದು ಶ್ರಾವಣಿಗೆ ಗೊತ್ತಿತ್ತು...
ತಾನು ೩ ತಿಂಗಳ ಮಗುವಿದ್ದಾಗಲೇ ತಾಯಿ ಮರಣಿಸಿದ್ದಳು ಎಂಬುದಾಗಲೀ,ತನ್ನನ್ನು ಅಜ್ಜಿಯೇ ತಾಯಿಯಾಗಿ ಬೆಳೆಸಿದ್ದಳೆಂಬುದಾಗಲೀ,ಶ್ರಾವಣಿಗೆ ತಿಳಿದದ್ದು ತನ್ನ ೧೫ ನೇ ವಯಸ್ಸಿನಲ್ಲಿ.,ಗೊತ್ತಿದ್ದೂ ಗೊತ್ತಿಲ್ಲದೆಯೋ ತಾಯಿ ಎಂದು ಒಪ್ಪಿಕೊಂಡಾಗಿದೆ.. ಈಗ ಸತ್ಯ ಗೊತ್ತಾಗಿದ್ದರೂ ಮನಸ್ಸು ಬದಲಾಗದು..... ಬದಲಾಯಿಸಲು ಸಾಧ್ಯವೂ ಇಲ್ಲ.,!ಹೆತ್ತಮ್ಮನನ್ನು ಕಳೆದುಕೊಂಡಿದ್ದ ನೋವನ್ನು ಅಜ್ಜಿಯ ಪ್ರೀತಿಯಲ್ಲಿ ಮರೆತಾಗಿತ್ತು.... ಅದೆಷ್ಟೇ ನೋವನ್ನು ಮರೆತಿದ್ದೇನೆ ಎಂದರೂ ಆಕೆಯ ೧೫ನೇ ವರ್ಷದಿಂದ ಕಾಡುತ್ತಿದ್ದ ತಾಯಿಯ ಸ್ಥಾನವನ್ನು ಯಾರೂ ತುಂಬಲಾರರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಬರಾಟೆಯಲ್ಲಿದ್ದಳು.. ನಿಜವಾಗಿ ತಾಯಿ ಎಂದರೆ ಯಾರು? ?ನವಮಾಸಗಳೂ ಗರ್ಭದಲ್ಲಿ ಹುದುಗಿಸಿ ಪೋಷಿಸಿದವಳೇ ಅಥವಾ ಜನಿಸಿದ ನಂತರ ಮಗುವನ್ನು ಪೋಷಿಸಿ ಬೆಳೆಸಿ ಸನ್ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸಿದವಳೇ? ?ಕೆಲವೊಮ್ಮೆ ಹೆತ್ತ ತಾಯಿಯೂ ಮಕ್ಕಳನ್ನೂಬೀದಿಯಲ್ಲಿ ಮಲಗಿಸಿ ಹೋದ ದಾಖಲೆಗಳಿಲ್ಲವೇ..?ಕೆಲವೊಮ್ಮೆ ಹೆತ್ತ ತಾಯಿಯೇ ಮಕ್ಕಳನ್ನು ಕೊಂದು ತಾನು ಸತ್ತ ದಾಖಲೆಗಳಿಲ್ಲವೇ..?ತಾಯಿ ಇಲ್ಲದ ಪರದೇಶಿ ಎಂದು ಅನುಕಂಪಿಸುವ ಜನ ಆ ತಾಯಿಯ ಪ್ರೀತಿಯನ್ನು ಕೊಡಲು ಮುಂದಾಗುವುದಿಲ್ಲ.. ಬದಲಿಗೆ ಇನ್ನೂ ನಾಟಕೀಯ ಅನುಕಂಪವನ್ನು ತೋರಿ ಮನಃ ನೋಯಿಸುತ್ತಾರೆ..ಬೀಳುವುದನ್ನೇ ಕಾರುತ್ತಾ ಕೂರುವ ಈ ಕಾಲದಲ್ಲಿ ಕೈ ಹಿಡಿದು ಎತ್ತುವ ಸಾಹಸಕ್ಕೆ ಯಾರೂ ಮುಂದಾಗುವುದಿಲ್ಲ ಅದು ಅವರಿಗೆ ಸಾಧ್ಯವೂ ಇಲ್ಲವೆನ್ನಿ,..!ಇತರರ ಕಣ್ಣೀರಿಗೆ ಕಾಯುತ್ತಾ ಅವರನ್ನು ನೋಯಿಸುವ ಮನಸ್ಸಿರುವವರಿಗೆ ಅಂತಹ ಒಳ್ಳೆಯ ಮನಸ್ಸೆಲ್ಲಿಂದ ಬರಬೇಕು ....??ಅದೆಷ್ಟೋ ಸಾವಿರ ಜನರಲ್ಲಿ ಒಬ್ಬರಿಗೆ ಅಂತಹ ಮನಸ್ಸಿದ್ದರೂ ಅದನ್ನು ಸಹಿಸದ ಮೂರ್ಖ ಜನರೂ ಇರುತ್ತಾರೆ....!!
ಶ್ರಾವಣಿಗೆ ಇನ್ನೂ ನೆನಪಿತ್ತು ಅಜ್ಜಿ(ಅಮ್ಮ) ಹೇಳುತ್ತಿದ್ದ ಕಥೆ.. ಶ್ರೀ ಕೃಷ್ಣ ಪರಮಾತ್ಮನಿಗೆ ಹೆತ್ತ ತಾಯಿ ದೇವಕಿಯೇ ಆಗಿದ್ದರೂ ಅವನ ಎಲ್ಲಾ ಸಾಕು-ಸಲಹುಗಳ ಜವಾಬ್ದಾರಿ ಯಶೋದೆಯದ್ದೇ ಆಗಿತ್ತು ಅಂತ.,ಕೃಷ್ಣ ನನ್ನು ಭೂಮಿಗೆ ತಂದ ತಾಯಿ ದೇವಕಿಯೇ ಆಗಿದ್ದರೂ ಆತ ಹುಟ್ಟಿದಾಗಿನಿಂದ ಆತನ ಜವಾಬ್ದಾರಿ. ಯಶೋದೆಯದು....ಇವರೀರ್ವರಲ್ಲಿ ಇಬ್ಬರೂ ತಾಯಿಯರೇ,ಯಾರ ಪ್ರೀತಿ,ಮಮತೆಯನ್ನು ಅಳತೆ ಮಾಡಲಾಗದು,. ಇದನ್ನೆಲ್ಲಾ ಕೇಳಿ ಶ್ರಾವಣಿಯೂ ಸಂತೋಷ ಪಡುತ್ತಿದ್ದಳು ತನಗೂ ಇಬ್ಬರು ತಾಯಂದಿರೆಂದು......!!
ಜೀವನದಲ್ಲಿ ಅಮ್ಮ ಇಲ್ಲ ಎಂಬುದೇ ಕೊರಗಲ್ಲ,ಆ ಸ್ಥಾನವನ್ನು ಯಾರೂ ನೀಡದಿದ್ದರೆ ಅದು ಕೊರಗು.,ಯಾರು ಆಪ್ಯಾಯಮಾನವಾದ ನಿಶ್ಕಲ್ಮಶ ಪ್ರೀತಿಯನ್ನು ಕೊಡುತ್ತಾರೋ ಅಲ್ಲಿ ಅಮ್ಮ ಇದ್ದಾಳೆ....ಅಮ್ಮನೆಂದರೇ ಅರ್ಥವಿಷ್ಟೇ ನಿಶ್ಕಲ್ಮಶ ಪ್ರೀತಿ,ಮಮತೆ,ಕಾಳಜಿ...... ಅವಳು ಅಂದರೆ ಏನೋ ವಿಭಿನ್ನ...ಹೀಗೆ ಒಬ್ಬ ಆದರ್ಶ ಅಮ್ಮನಿಗಿರುವ ಎಲ್ಲಾ ಲಕ್ಷಣಗಳು ತನ್ನಮ್ಮನಲ್ಲಿತ್ತು.,ಆದರೇ ಕರುಳು ಬಳ್ಳಿಯ ಸಂಕೋಲೆಯ ಹೊರತಾಗಿ ...!!
ತನ್ನನ್ನು ಸಲಹಿದ್ದ ಆಕೆ ತನಗೆ ಬರೀ ತಾಯಿಯಲ್ಲ....ಮಹಾತಾಯಿ..ಹ್ಞೂ....ಅಂತೂ ತನ್ನ ಎಲ್ಲಾ ಪ್ರಶ್ನೆ ಗಳಿಗೆ ಉತ್ತರ ಕಂಡುಕೊಂಡಿದ್ದಳು ಶ್ರಾವಣೀ ...ತನ್ನನ್ನು ಅನಾಥೆ ಎಂದು ತುಚ್ಚೀಕರಿಸುತ್ತಿರುವವರ ಮುಂದೆ ದಿಟ್ಟ ಹೆಜ್ಜೆಗಳನ್ನು ಹಾಕಲು ಶ್ರಾವಣೀ ಸನ್ನದ್ದಳಾಗಿದ್ದಳು,ಆ ದಿಟವಾದ ಹೆಜ್ಜೆಗಳು ಎಂದಿಗೂ ಯಾರಿಗೋ ಹೆದರಿ ಹಿಂದೆ ಸರಿಯುವ ಹೆಜ್ಜೆಗಳಾಗಿರಲಿಲ್ಲ.......

No comments:
Post a Comment