Friday, 26 February 2016

                                           ಯಾವ ಮೋಹನ ಮುರಳಿ ಕರೆಯಿತು….

         ತಾನು ತನ್ನತನ ಎಂಬ ಆಳ ಸಾಗರದೊಳಗೆ ಹೊಕ್ಕಿಯಾಗಿದೆ.., ದೂರ ತೀರದಲ್ಲಿ ಮುರಳಿಯ ನಾದ  ಹಿತವೆನಿಸಿದರೂ 'ತನ್ನ' ಮಹಾಸಾಗರವನ್ನು ಬಿಟ್ಟು ಹೊರಬರಲಾಗುತ್ತಿಲ್ಲ ,. ಹೊರಬರಲಾಗುತ್ತಿಲ್ಲ ಎನ್ನುವುದಕ್ಕಿಂತ ಪ್ರಯತ್ನಿಸುತ್ತಿಲ್ಲ....!

                        ......ತನ್ನ ಮಹಾಸಾಗರ... ಅದರಲ್ಲಿ ತಾನು,ತನ್ನವರು, ಜೊತೆಗೆ ತನ್ನದೇ ಆದ ಗುರಿಗಳು,ಬಯಕೆಗಳು,ಬೆಟ್ಟದಷ್ಟು,ಕನಸುಗಳು ಅದೆಷ್ಟರ ಮಟ್ಟಿಗೆ ಈಡೇರುತ್ತದೋ,ನಿರೀಕ್ಷೆಗಳು ಎಷ್ಟರ ಮಟ್ಟಿಗೆ ನೆರವೇರುವುದೋ ಯಾರೂ ಊಹಿಸಲಾರರು.... ಬರಿಯ ಮೂಳೆ-ಮಾಂಸದ ದೇಹದೊಳಗೆ ಉಸಿರಾಟದಿಂದಷ್ಟೇ ಅಸ್ತಿತ್ವವಿದೆ.... ನಾನು-ನನ್ನದು ಎಂಬ ಆತನ ಅಸ್ತಿತ್ವ ಇರುವುದು ಆತನ ಪ್ರಾಣದಲ್ಲಿಯಷ್ಟೇ.,ಆತನ ಅಸ್ಥಿತ್ವದ ಕುರುಹಾಗಿರುವ ಆತನ ಉಸಿರೇ ಇಲ್ಲವಾದಾಗ ಅವನ ಕನಸುಗಳೆಲ್ಲಿ,ನಿರೀಕ್ಷೆಗಳೆಲ್ಲಿ,ತಾನು ತನ್ನದೂ ಎಂಬ ಒಣಪ್ರತಿಷ್ಟೆಗಳೆಲ್ಲಿ ಉಳಿದಾವು? ?

                 ಜೀವನದಲ್ಲಿ ಮನುಷ್ಯ ಸುಖಕ್ಕಾಗಿಯಷ್ಟೇ ಪರಿತಪಿಸುತ್ತಾನೆ., ತನ್ನ ಹಿತಕ್ಕಾಗಿ ಏನನ್ನಾದರೂ ಮಾಡಬಲ್ಲ., ನಾಲ್ಕು ದಿನದ ಬದುಕಿಗೆ ಏನಾದರೂ ಮಾಡಬಲ್ಲ., ತನ್ನ ಬದುಕನ್ನು ಕೇವಲ ತನ್ನ ಕನಸುಗಳ,ಬಯಕೆಗಳ ತೃಪ್ತಿಗಾಗಿಯಷ್ಟೇ ಸೀಮಿತಗೊಳಿಸುತ್ತಾನೆ....ತನ್ನ ನಶಿಸುವ ದೇಹಕ್ಕಾಗಿ ದುಡಿದು ಹಣ್ಣಾಗಿರುತ್ತಾನೆ, ಅದೆಷ್ಟರ ಮಟ್ಟಿಗೆ ಎಂದರೇ ತನ್ನ ಜಗತ್ತಿನಿಂದ ಹೊರಬರಲೂ ಸಾಧ್ಯವಾಗದ ಸ್ಥಿತಿಗೆ ಬಂದಿರುತ್ತಾನೆ ತನ್ನ ಭವ ಸಾಗರದ ಆಳದಲ್ಲಿ ಹೊಕ್ಕವನಿಗೆ ಇನ್ನೊಂದು ಸುಪ್ತ ಅಲೌಕಿಕ ಲೋಕದ ಸೌಂದರ್ಯದ ಸ್ವಾದವನ್ನು ಆಘ್ರಾಣಿಸುವ ವ್ಯವದಾನ ಅಥವಾ ಸಮಯವಂತೂ ಇರುವುದಿಲ್ಲ.... ತನ್ನ ಬಯಕೆಗಳಿಗೆ,ತನ್ನ ಕನಸುಗಳಿಗಷ್ಟೇ ತನ್ನ ಪ್ರಂಪಂಚದಲ್ಲಿ ಬೇಲಿ ಹಾಕಿಕೊಂಡು ಬದುಕುವ ಬರಾಟೆಯಲ್ಲಿರುತ್ತಾನೆ.... ಅದಕ್ಕೆ ಕೊನೆ ಎಂದೋ ಶುರುವೆಂದೋ.....

                 ತನಗಾಗಿ, ತನ್ನ ಸ್ವಾರ್ಥಕ್ಕಾಗಿ ಹಾಕಿಕೊಂಡ ಬೇಲಿ ಒಂದು ದಿನ ತಾನಾಗೇ ಕಳಚಿ ಬೀಳುತ್ತದೆ ಎಂಬುದು ಅರಿವಿದ್ದರೂ ಬಿಡದ ನಿರೀಕ್ಷೆ...! ತನ್ನದಲ್ಲದರ ಬಗ್ಗೆ ಅತಿಯಾದ ವ್ಯಾಮೋಹ.,ಬಿಡದ ಹುಚ್ಚು, ಸುಪ್ತಪ್ರಜ್ಞೆಯಲ್ಲಿ ತನ್ನನ್ನು ಯಾವಾಗಲೂ ಕೈ ಬೀಸಿ ಕರೆಯುತ್ತಾ   ಜಾಗೃತಗೊಳಿಸುವ ಆಧ್ಯಾತ್ಮಿಕ ಶಕ್ತಿಯ  ಶಾಶ್ವತ ಸುಖದತ್ತ ಹೊರಳಲು ಮನಸ್ಸು ಹಿಂಜರೆಯುತ್ತದೆ.. ಜೀವನದ ಸಣ್ಣ ಪುಟ್ಟ ಕನಸುಗಳ ಅಥವಾ ಗುರಿಯ ಈಡೇರಿಕೆಯನ್ನೇ ಮಹಾನ್ ಸಾಧನೆಯೆಂಬಂತೆ ಬೀಗುತ್ತಾನೆ.. ಆದರೆ ಇದಕ್ಕೂ ಮಿಗಿಲಾದ ಆಧ್ಯಾತ್ಮಿಕ ಸುಖ ತೀರದಾಚೆ ಕೈ ಬೀಸಿ ಕರೆಯುತ್ತಿದೆ.,ಮನುಷ್ಯನ ನಿಜವಾದ ಸುಖವಿರುವುದು ಆಧ್ಯಾತ್ಮಿಕ ಸಾಧನೆಯಲ್ಲಿ....! ಇರುವುದೆಲ್ಲವನ್ನೂ ಬದಿಗೊತ್ತಿ ಇರದಿರುವ ಅಥವಾ ಶಾಶ್ವತ ವಲ್ಲದ ಬೌತಿಕ ಜಗತ್ತಿನ ಸಂಬಂಧಗಳಿಗಾಗಿ,ಬೌತಿಕ ವಸ್ತುಗಳಿಗಾಗಿ ಕೊನೆಗೆ ನಮ್ಮ ಬೌತಿಕ ದೇಹದ ಸುಖಕ್ಕಾಗಿ ದಿನಬೆಳಗಾದರೇ ಹೆಣಗುತ್ತಲೇ ಇರುತ್ತಾನೆ.,ನಾನು ನನ್ನದೆಂಬ ಬಂಧನದಾಚೆಗಿನ ಸುಪ್ತ ಸಮುದ್ರವನ್ನು ಸೇರಬೇಕೆನ್ನುವ ಆಸೆ ಅಥವಾ ಬಯಕೆ ಅದು ಅಂತಿಮ ಘಟ್ಟ.,..

                 ಅಧ್ಯಾತ್ಮಿಕ ಸಾಗರದೆಡೆ ದೂರದಿಂದೆಲ್ಲೋ ಕೂಗಿ ಕರೆಯುತ್ತಿರುವ ಮುರಳಿಯ ಕರೆಗೆ ' ಎನ್ನಬೇಕಿದೆ'.. ಒಮ್ಮೆ ನಾದಕ್ಕೆ ಸೋತರೇ ಇನ್ನೆಂದಿಗೂ ಯಾವುದಕ್ಕೂ ಸೋಲಲಾರರು,ಒಮ್ಮೆ ನಾದವನ್ನು ಅರಸಿ ಅಲ್ಲಿ ತಲುಪಿದ್ದೆ ಆದರೆ ಮತ್ತೆಂದು ಹಿಂದಕ್ಕೆ ಬರಲಾರಿರಿ,. ಮೋಹಕ ಆಧ್ಯಾತ್ಮಿಕ ಧ್ವನಿಯ ಶಕ್ತಿಯ ಸುಖ ಎಂದಿಗೂ ನಾಶವಾಗಲಾರದು.... ಯಾವ ಮೋಹನ ಮುರಳಿಯ ಕರೆಯೋ”....ಯಾವ ಬೃಂದಾವನದ ಸೆಳೆತವೋ”....ಕೊನೆಗೆ  ಶಾಶ್ವತ ಸುಖದತ್ತ ಕೊಂಡೊಯ್ದಿತ್ತು......
  


Thursday, 28 January 2016

                                                     ಕನಸುಗಳ ಬದುಕು....



                   ಸಂಜೆ ಕಾಲೇಜಿನಿಂದ ಬಂದು ಕಾಫಿ ಹೀರುತ್ತಾ ಬೆಚ್ಚಗೆ ಕೂತಿದ್ದೆ.. ಹೊರಗಡೆ ಮಳೆಯ ಹನಿಗಳು ಚಟಪಟಿಸುವ ಮೊದಲೇ ಗೆಳತಿ ದೀಪ್ತಿ ಕೂಗಿ ಕರೆದಾಗಿತ್ತು....... "ಅಕ್ಷೂ ಬೇಗ ಬಾರೆ ಮಳೆ ಬರ್ತಿದೆ ನೆನೆಯೋಣ''...
ಕರೆದಿದ್ದೇ ತಡ ಇರು ದೀಪು ಬಂದೆ ಎನ್ನುತ್ತಾ ಅರ್ಧ ಉಳಿದ ಕಾಫಿಯನ್ನು ಹಾಗೇ ಇಟ್ಟು ಅಂಗಳಕ್ಕೆ ಓಡಿದ್ದೆ .....!

            ಸುಮಾರು ಗಂಟೆಗಳ ಕಾಲ ನೆನೆದಾಟ.,ಮಳೆ ಪ್ರಾರಂಭದಲ್ಲಿ ನಾವಿಬ್ಬರಿದ್ದವರು ಆಮೇಲಾಮೇಲೆ ಹಾಸ್ಟೆಲ್ ಹುಡುಗಿಯರೆಲ್ಲಾ ನೆನದದ್ದೇ... ಅಡಿಗೆ ಆಂಟಿ ಲಲಿತಮ್ಮ ಕೋಲು ತಂದಾಗಲೇ ಅಂಗಳದಿಂದ ಮೇಲೆ ಹತ್ತಿದ್ದು....
ಆಮೇಲೆ ನಿಲ್ಲದ ಜ್ವರ,ಶೀತ ಏನೇ ಇರಲಿ ಆ ಚಿಕ್ಕ-ಪುಟ್ಟ ಸಂಗತಿಗಳು ಕೊಡುವ ಮಜವೇ ಬೇರೆ..... ಮೈ ನಡುಗಿಸುವ ಚಳಿಯಲ್ಲೂ ನಡುಗುತ್ತಾ  ice cream ತಿನ್ನೋದ್ರಲ್ಲಿನ ಖುಷಿ, cadburys ಅನ್ನುಪುಟ್ಟ ಮಕ್ಕಳಂತೆ  ಬಾಯ್ತುಂಬ ಮಾಡಿಕೊಂಡು ತಿನ್ನುವುದರಲ್ಲಿನ ಮಜ,.ಚಂದಾಮಾಮನ ಜೊತೆ ಮಾಡುವ ಬೆಳದಿಂಗಳ ಊಟದ ಸ್ವಾದ,ಗೆಳತಿಯ ತಟ್ಟೆಗೆ ಕೈ ಹಾಕಿ ಕೇವಲ ಚಿತ್ರಾನ್ನದಲ್ಲಿನ ಶೇಂಗಾಗೋಸ್ಕರವಷ್ಟೇ ನೆಡೆಸುವ ಕಿತ್ತಾಟದಲ್ಲಿಯೂ, ತೀಟೆಯಲ್ಲಿಯೂ ಸಿಗೋ ಸಂತೋಷ ಅಥವಾ enjoyment ಅನ್ನು ನೆನಸಿಕೊಂಡ್ರೇ ಮನಸ್ಸು ಹಿಗ್ಗುತ್ತೆ......

                       ಜೀವನವನ್ನು ಸೀರಿಯಸ್ ಆಗಿ ತಗೋ ಅಂತ ಎಲ್ಲರೂ lecture ಕೊಡ್ತಾರೆ... ಆದರೆ ನನ್ನ ಪ್ರಕಾರ Be like a child sometime.,do crazy and stupid things which gives u happy,.. ನಮ್ಮೊಳಗಿನ ಖುಷಿಯನ್ನು ನಾವೇ ಹೊರತರುವುದು ಅಂದ್ರೆ ಹೀಗೇನೆ..... ಈಗಿನ ಕೃತಕ ಜೀವನದಲ್ಲಿ ನಾನು,ನನ್ನ ಸಂಸಾರ,ದುಡಿಮೆಯಷ್ಟೇ ಬಿಟ್ಟರೆ ಸಂತೋಷವನ್ನು ಸಂಪಾದನೆ ಮಾಡಲು ಯಾವ ವ್ಯಕ್ತಿಯೂ ಮುಂದಾಗುತ್ತಿಲ್ಲ.... ಮುಂದಾಗುವುದಿಲ್ಲ ಎನ್ನುವ ಬದಲು ಸಮಯವಿರಲ್ಲ ಎನ್ನಿ....... ದಿನದಲ್ಲಿ ಸ್ವಲ್ಪ ಸಮಯವಾದರೂ ತಲೆಬಿಸಿಗಳನ್ನು ದೂರಮಾಡಿ ಪುಟ್ಟ ಮಕ್ಕಳಾಗಿರಿ.,ಅದಿಲ್ಲ, ಇದಿಲ್ಲ,ಛೇ ಹಾಗಾಯಿತಲ್ಲ ಹೀಗಾಯ್ತಲ್ಲ ಅಂತ ಹಪಹಪಿಸಿದರೆ ನೀವಂದುಕೊಂಡ ಹಾಗೆ ಆಗಲ್ಲ ಅಲ್ವಾ...?ವ್ಯರ್ಥ ಕಾಲಹರಣ.,

              ....so just chill..be a child again atleast daily one tym..ಅದರಲ್ಲಿ ಸಿಗೋ ಖುಷಿ ಮತ್ತೊಂದಿಲ್ಲ.,ಜೊತೆ ಇರುವವರನ್ನು ನಗಿಸಿ,ನಗಿ.... ಇನ್ನೂ ಜಾಸ್ತಿ ಖುಷಿ ಬೇಕೆಂದ್ರೇ ಚಿಕ್ಕ ಪುಟ್ಟ ಕನಸುಗಳನ್ನು ಹೆಣೆಯಿರಿ.... ನಾನು ಮೇಲೆ ಹೇಳಿರುವ ತರಹದ ಕನಸುಗಳು... ಅವು stupidity ಅನ್ಸಿದ್ರೂ..,ಆ stupid ಕನಸುಗಳು ಈಡೇರಿದಾಗ ಆಗುವ ಖುಷಿ ಹೇಳಲಾರದ್ದು ..,

            ಕೊನೆಯದಾಗಿ ಏನೇ ಆಗಲಿ ಮೊದಲು ನಗುವುದನ್ನು ಕಲಿಯೋಣ,ಜೊತೆಗೆ ನಗಿಸುವುದನ್ನೂ,ಮಕ್ಕಳಾಗೋಣ ಜೊತೆಗೆ ಅವರಂತೆ ಮುಗ್ಧತೆಯನ್ನು ಬೆಳೆಸಿಕೊಳ್ಳೋಣ..ಜವಾಬ್ದಾರಿ, ಹುಡುಗಾಟ,ತರ್ಲೆಗಳು ಜೊತೆ-ಜೊತೆಗೆ ನಮ್ಮ ಕನಸುಗಳು.... ಎಲ್ಲವೂ ಬೇಕು.. ಕನಸುಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ., But be a dreamer....share the path with your dreams.......:-)

Monday, 4 January 2016

                                                        ನಿಜವಾಗಿ ಅಮ್ಮನೆಂದರೇ ....                                               

                ತನಗೆ ತಾನೇ ಪ್ರಶ್ನೆ ಹಾಕಿಕೊಂಡು ಗಂಟೆಗಟ್ಟಲೆ,ದಿನಗಟ್ಟಲೆ ಯೋಚಿಸಿದರೂಆ ಅಭಿಪ್ರಾಯ ತಪ್ಪು....ಅವಳ ತಕ್ಕಡಿ ತನ್ನ ಅಭಿಪ್ರಾಯವನ್ನೇ ಮೇಲಿರಿಸಿತ್ತು.,ತನ್ನನ್ನು ತಾನು ಸಮರ್ಥಿಸಿಕೊಂಡಿದ್ದ ರೀತಿ ಅದು....ವಿಧಿಯೇ ಇರಲಿಲ್ಲ ಸಮರ್ಥನೆ ನೂರು ಪ್ರತಿಶತ ಸರಿಯೇ ಇದ್ದಿತ್ತು.......  
 
         ಇಷ್ಟು ದಿನ ಅಮ್ಮನಾಸರೆಯ ಮುದ್ದು ಕೂಸಾಗಿ ಬೆಳೆದು,ಯಾರಿಂದಲೋ ಆಕೆ ತನ್ನ ನಿಜವಾದ ಅಮ್ಮನಲ್ಲವೆಂದು ತಿಳಿದಾಗ ಆದ ಸಂಕಟ ಹೇಳುವಂತದ್ದಲ್ಲ..ತನಗೀಗ ವರ್ಷ ೧೫ ಬೆರಳೆಣಿಸಿದ್ದಳು ಶ್ರಾವಣೀ,ತೀರಾ ತಿಳುವಳಿಕೆ ಇಲ್ಲ ಎನ್ನುವ ವಯಸ್ಸೇನೂ ಅಲ್ಲ,. ಯೋಚಿಸುವ, ಅರ್ಥ ಮಾಡಿಕೊಳ್ಳುವ ಸಹಜ ಸ್ವಭಾವ ಅವಳಲ್ಲೂ ಬಂದಿತ್ತು ....    ಅವಳುದರದಲ್ಲಿ ನವಮಾಸಗಳು ತನ್ನನ್ನು ಹುದುಗಿಸಿ ಕಾಪಾಡದಿದ್ದರೂ,ಹುಟ್ಟಿದ ಮರುಕ್ಷಣದಿಂದ ಈ ಕ್ಷಣದ ವರೆಗೂ ಕಂಡಿದ್ದು ಇವಳ ಪ್ರೀತಿಯನ್ನೇ,ತಿಂದಿದ್ದು ಇವಳ ಕೈ ತುತ್ತನ್ನೇ..'ಅಮ್ಮಾ ' ಎಂದು ಕರೆದದ್ದು ಇವಳನ್ನೇ....ಮಕ್ಕಳಿಲ್ಲದ ಆಕೆಯೂ ತನ್ನ ತಾಯ್ತನದ ಅಷ್ಟೂ ಹಾರೈಕೆಗಳನ್ನು ತೋರಿಸಿದ್ದಳು  ಎಂದು ಶ್ರಾವಣಿಗೆ ಗೊತ್ತಿತ್ತು...

                          ತಾನು ೩ ತಿಂಗಳ ಮಗುವಿದ್ದಾಗಲೇ ತಾಯಿ ಮರಣಿಸಿದ್ದಳು ಎಂಬುದಾಗಲೀ,ತನ್ನನ್ನು ಅಜ್ಜಿಯೇ ತಾಯಿಯಾಗಿ ಬೆಳೆಸಿದ್ದಳೆಂಬುದಾಗಲೀ,ಶ್ರಾವಣಿಗೆ ತಿಳಿದದ್ದು  ತನ್ನ ೧೫ ನೇ ವಯಸ್ಸಿನಲ್ಲಿ.,ಗೊತ್ತಿದ್ದೂ ಗೊತ್ತಿಲ್ಲದೆಯೋ ತಾಯಿ ಎಂದು ಒಪ್ಪಿಕೊಂಡಾಗಿದೆ.. ಈಗ ಸತ್ಯ ಗೊತ್ತಾಗಿದ್ದರೂ ಮನಸ್ಸು ಬದಲಾಗದು..... ಬದಲಾಯಿಸಲು ಸಾಧ್ಯವೂ ಇಲ್ಲ.,!ಹೆತ್ತಮ್ಮನನ್ನು ಕಳೆದುಕೊಂಡಿದ್ದ ನೋವನ್ನು ಅಜ್ಜಿಯ ಪ್ರೀತಿಯಲ್ಲಿ ಮರೆತಾಗಿತ್ತು.... ಅದೆಷ್ಟೇ ನೋವನ್ನು ಮರೆತಿದ್ದೇನೆ ಎಂದರೂ ಆಕೆಯ ೧೫ನೇ ವರ್ಷದಿಂದ ಕಾಡುತ್ತಿದ್ದ  ತಾಯಿಯ ಸ್ಥಾನವನ್ನು ಯಾರೂ ತುಂಬಲಾರರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಬರಾಟೆಯಲ್ಲಿದ್ದಳು.. ನಿಜವಾಗಿ ತಾಯಿ ಎಂದರೆ ಯಾರು? ?ನವಮಾಸಗಳೂ ಗರ್ಭದಲ್ಲಿ ಹುದುಗಿಸಿ ಪೋಷಿಸಿದವಳೇ ಅಥವಾ ಜನಿಸಿದ ನಂತರ ಮಗುವನ್ನು ಪೋಷಿಸಿ ಬೆಳೆಸಿ ಸನ್ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸಿದವಳೇ? ?ಕೆಲವೊಮ್ಮೆ ಹೆತ್ತ ತಾಯಿಯೂ ಮಕ್ಕಳನ್ನೂಬೀದಿಯಲ್ಲಿ ಮಲಗಿಸಿ ಹೋದ ದಾಖಲೆಗಳಿಲ್ಲವೇ..?ಕೆಲವೊಮ್ಮೆ ಹೆತ್ತ ತಾಯಿಯೇ ಮಕ್ಕಳನ್ನು ಕೊಂದು ತಾನು ಸತ್ತ ದಾಖಲೆಗಳಿಲ್ಲವೇ..?ತಾಯಿ ಇಲ್ಲದ ಪರದೇಶಿ ಎಂದು ಅನುಕಂಪಿಸುವ ಜನ ಆ ತಾಯಿಯ ಪ್ರೀತಿಯನ್ನು ಕೊಡಲು ಮುಂದಾಗುವುದಿಲ್ಲ.. ಬದಲಿಗೆ ಇನ್ನೂ ನಾಟಕೀಯ ಅನುಕಂಪವನ್ನು ತೋರಿ ಮನಃ ನೋಯಿಸುತ್ತಾರೆ..ಬೀಳುವುದನ್ನೇ ಕಾರುತ್ತಾ ಕೂರುವ ಈ ಕಾಲದಲ್ಲಿ ಕೈ ಹಿಡಿದು ಎತ್ತುವ ಸಾಹಸಕ್ಕೆ ಯಾರೂ ಮುಂದಾಗುವುದಿಲ್ಲ ಅದು ಅವರಿಗೆ ಸಾಧ್ಯವೂ ಇಲ್ಲವೆನ್ನಿ,..!ಇತರರ ಕಣ್ಣೀರಿಗೆ ಕಾಯುತ್ತಾ ಅವರನ್ನು ನೋಯಿಸುವ ಮನಸ್ಸಿರುವವರಿಗೆ ಅಂತಹ ಒಳ್ಳೆಯ ಮನಸ್ಸೆಲ್ಲಿಂದ ಬರಬೇಕು ....??ಅದೆಷ್ಟೋ ಸಾವಿರ ಜನರಲ್ಲಿ ಒಬ್ಬರಿಗೆ ಅಂತಹ ಮನಸ್ಸಿದ್ದರೂ ಅದನ್ನು ಸಹಿಸದ ಮೂರ್ಖ ಜನರೂ ಇರುತ್ತಾರೆ....!!

                    ಶ್ರಾವಣಿಗೆ ಇನ್ನೂ ನೆನಪಿತ್ತು ಅಜ್ಜಿ(ಅಮ್ಮ) ಹೇಳುತ್ತಿದ್ದ ಕಥೆ.. ಶ್ರೀ ಕೃಷ್ಣ ಪರಮಾತ್ಮನಿಗೆ ಹೆತ್ತ ತಾಯಿ ದೇವಕಿಯೇ ಆಗಿದ್ದರೂ ಅವನ ಎಲ್ಲಾ ಸಾಕು-ಸಲಹುಗಳ ಜವಾಬ್ದಾರಿ ಯಶೋದೆಯದ್ದೇ ಆಗಿತ್ತು ಅಂತ.,ಕೃಷ್ಣ ನನ್ನು ಭೂಮಿಗೆ ತಂದ ತಾಯಿ ದೇವಕಿಯೇ ಆಗಿದ್ದರೂ ಆತ ಹುಟ್ಟಿದಾಗಿನಿಂದ ಆತನ ಜವಾಬ್ದಾರಿ. ಯಶೋದೆಯದು....ಇವರೀರ್ವರಲ್ಲಿ ಇಬ್ಬರೂ ತಾಯಿಯರೇ,ಯಾರ ಪ್ರೀತಿ,ಮಮತೆಯನ್ನು ಅಳತೆ ಮಾಡಲಾಗದು,. ಇದನ್ನೆಲ್ಲಾ ಕೇಳಿ ಶ್ರಾವಣಿಯೂ ಸಂತೋಷ ಪಡುತ್ತಿದ್ದಳು ತನಗೂ ಇಬ್ಬರು ತಾಯಂದಿರೆಂದು......!!

                ಜೀವನದಲ್ಲಿ ಅಮ್ಮ ಇಲ್ಲ ಎಂಬುದೇ ಕೊರಗಲ್ಲ,ಆ ಸ್ಥಾನವನ್ನು ಯಾರೂ ನೀಡದಿದ್ದರೆ ಅದು ಕೊರಗು.,ಯಾರು ಆಪ್ಯಾಯಮಾನವಾದ ನಿಶ್ಕಲ್ಮಶ ಪ್ರೀತಿಯನ್ನು ಕೊಡುತ್ತಾರೋ ಅಲ್ಲಿ ಅಮ್ಮ ಇದ್ದಾಳೆ....ಅಮ್ಮನೆಂದರೇ ಅರ್ಥವಿಷ್ಟೇ ನಿಶ್ಕಲ್ಮಶ ಪ್ರೀತಿ,ಮಮತೆ,ಕಾಳಜಿ...... ಅವಳು ಅಂದರೆ ಏನೋ ವಿಭಿನ್ನ...ಹೀಗೆ ಒಬ್ಬ ಆದರ್ಶ ಅಮ್ಮನಿಗಿರುವ ಎಲ್ಲಾ ಲಕ್ಷಣಗಳು ತನ್ನಮ್ಮನಲ್ಲಿತ್ತು.,ಆದರೇ ಕರುಳು ಬಳ್ಳಿಯ ಸಂಕೋಲೆಯ ಹೊರತಾಗಿ ...!!

             ತನ್ನನ್ನು ಸಲಹಿದ್ದ ಆಕೆ ತನಗೆ ಬರೀ ತಾಯಿಯಲ್ಲ....ಮಹಾತಾಯಿ..ಹ್ಞೂ....ಅಂತೂ ತನ್ನ ಎಲ್ಲಾ ಪ್ರಶ್ನೆ ಗಳಿಗೆ ಉತ್ತರ ಕಂಡುಕೊಂಡಿದ್ದಳು ಶ್ರಾವಣೀ ...ತನ್ನನ್ನು ಅನಾಥೆ ಎಂದು ತುಚ್ಚೀಕರಿಸುತ್ತಿರುವವರ ಮುಂದೆ ದಿಟ್ಟ ಹೆಜ್ಜೆಗಳನ್ನು ಹಾಕಲು ಶ್ರಾವಣೀ ಸನ್ನದ್ದಳಾಗಿದ್ದಳು,ಆ ದಿಟವಾದ ಹೆಜ್ಜೆಗಳು ಎಂದಿಗೂ ಯಾರಿಗೋ ಹೆದರಿ ಹಿಂದೆ ಸರಿಯುವ ಹೆಜ್ಜೆಗಳಾಗಿರಲಿಲ್ಲ.......