Friday, 11 December 2015

                                                                          ಅವಳಂತರಾಳ.......                    


           ತನ್ನ ಬದುಕಿನ ಅಷ್ಟೂ ಸಮಯವನ್ನು ಅವನಿಗಾಗಿ ಕಳೆದಿದ್ದಳಾಕೆ,ಇದ್ದಾಗ ಅವನ ಜೊತೆ ಅವನಿಲ್ಲದಾಗ ಅವ ಜೊತೆ ಇದ್ದ ಕ್ಷಣದ ನೆನಪುಗಳ ಜೊತೆ......ಅವರಿಬ್ಬರ ನಡುವೆ ಸ್ನೇಹವೋ,ಪ್ರೀತಿಯೋ ಅಥವಾ ಮೋಹವೋ ಏನೋ..!!ಅಥವಾ ಅವೆಲ್ಲವೂ ಅವರಲ್ಲಿ ಬೆಸೆದಿತ್ತು....ಅವಳಂತೆ ಈ ಪ್ರಪಂಚದಲ್ಲಿ ಯಾರೂ ಯಾರನ್ನೂ ಪ್ರೀತಿಸಲಾರರು..ಸುದೀರ್ಘ ನಿಶ್ಕಲ್ಮಶ ಪ್ರೀತಿಯದು..ಮಾತಿನಲ್ಲಿ ಹೇಳಲಾಗದ,ಬರವಣಿಗೆಯಲ್ಲಿ ಗೀಚಲಾಗದ ಅವ್ಯಕ್ತ ಅಲೌಕಿಕ ಪ್ರೇಮವದು....!!    ಕೃಷ್ಣ... ರಾಧೆಯ ಏದುಸಿರು,ಅವಳ ಕಾತರ,ಅವಳ ದನಿ,ಅವಳ ನೆನಪು.....ನಿಜ ಕೃಷ್ಣ ರಾಧೆಯ ಅಂತರಾಳ......!!    
           
                  ಪ್ರೀತಿಗೆ ನಿಜವಾದ ಹೆಸರದು ರಾಧೆ..ತಮ್ಮ ಸರ್ವಸ್ವವನ್ನೆಲ್ಲವನ್ನೂ ಕೃಷ್ಣನಗಳಿಗರ್ಪಿಸಿದ ಪುಣ್ಯ ಸ್ತ್ರೀಯರಲ್ಲಿ  ಒಬ್ಬಳು ರಾಧೆ..ಭೌತಿಕ ಆಸೆ-ಆಕಾಂಕ್ಷೆಗಳನ್ನು ಮೂಲೆ ಗುಂಪಾಗಿಸಿ ದೇವೋತ್ತಮನ ಚರಣಗಳಿಗೆ ತನು-ಮನಗಳೊಂದಿಗೆ ಅರ್ಪಿಸಿಕೊಂಡಿದ್ದಳಾಕೆ..ಪ್ರತಿಯೊಂದು ಚರಾಚರಗಳಲ್ಲೂ ಅವನನ್ನೇ ಕಾಣುತ್ತಿದ್ದಳಾಕೆ..ಅವನ ಕೊಳಲಿನ ದನಿಗೆ ಚಾತಕ ಪಕ್ಷಿ ಮಳೆಯ ನಿರೀಕ್ಷೆಯಲ್ಲಿ ಕಾಯುವಂತೆ  ಪರಿತಪಿಸುತ್ತಿದ್ದಳಾಕೆ..ಬರೀ ಅವನಿಗಾಗಿ,ಅವನ ಕೊಳಲಿನ ದನಿಗಾಗಿಯಷ್ಟೇ.....ಅವನನ್ನು ಪಡೆಯಬೇಕೆಂಬ ಹಂಬಲವಷ್ಟೇ ಆಕೆಯಲ್ಲಿ,ಅವನ ಕಣ್ಣಲ್ಲಿ ತನ್ನ ತಾನು ಕಾಣಬೇಕೆಂಬ ಕೋರಿಕೆಯಷ್ಟೇ ಮನಸ್ಸಿನಲ್ಲಿ...
         
            ಕೃಷ್ಣ., ಆತನಿಗಾಗಿ ಪ್ರತೀ ನಿಮಿಷವೂ ತುಡಿತ,ಅದ್ಯಾರೇ ಬರಲು ಅವನೇ ಬಂದನೆಂಬ ನಿರೀಕ್ಷೆ ಅವಳ ಕಣ್ಗಳಲ್ಲಿ,ಬಾಯಲ್ಲಿ ಅವನದೇ ಸುದ್ದಿ ಪಟ-ಪಟನೇ ಮುತ್ತು ಸುರಿದಂತೆ ಬರುತ್ತಿತ್ತು,ಯಾರೇ ಬರಲಿ ಅವನ ಬಗೆಗಿನ ತನ್ನ ಪರಿತಾಪವನ್ನುವ್ಯಕ್ತಪಡಿಸುವ ಪರಿ.. ಅನ್ನಿಸುವುದಂತೂ ನಿಜ ಇವಳೆಂತಾ ಹುಚ್ಚಿ..,ಅಲ್ಲ ಅಲ್ಲ ಆ ಕೃಷ್ಣನೆಂತಾ ಮೋಡಿಗಾರ....!!ಅವಳೆಲ್ಲಾ ಕನಸುಗಳಲ್ಲಿ ತನ್ನನ್ನು ಮಾತ್ರಾ ಆವರಿಸಿಕೊಂಡಿದ್ದ,ಅವಳ ಮನಸ್ಸಲ್ಲಿ ತನ್ನ ನೆಲೆಯನ್ನಷ್ಟೇ ಬಿತ್ತರಿಸಿಕೊಂಡಿದ್ದ, ಅವಳ ಪ್ರೀತಿ-ವಿರಹಗಳ ಅಧಿಕೃತ ಅಧಿಕಾರಿಯಾಗಿದ್ದ ಕೃಷ್ಣನೆಂತಾ ಮೋಡಿಗಾರ ಎಂಬ ಪ್ರಶ್ನೆ ಬರಬೇಕಾದ್ದೇ...!!      

   ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವಾ..!ಕೊಟ್ಟದ್ದು ಬರಿಯ ಮಾತನ್ನಷ್ಟೇ,ರಾಧೆಯ ಉಸಿರಿನ ಏರು ಪೇರುಗಳಲ್ಲಿ ಬರೀ ನೆನಪುಗಳಾಗಿಯಷ್ಟೇ ಉಳಿದು,ತಾನು ಮರೆಯಾಗಿದ್ದ....!         ಎಲ್ಲಾ  ಜೀವಿಗಳ ಜೀವಾತ್ಮನಾಗಿರುವವನು ರಾಧೆಯ ಪ್ರೀತಿಯನ್ನು ತಿಳಿದೂ ದೂರವಾದನೇ..??ಕಾರಣವಿದ್ದು ಅನಿವಾರ್ಯವಾಗಿ ಗೆಳತಿಯನ್ನು ಬಿಟ್ಟು ಹೊರಟನೇ..??ಕೊನೆಗೆ ತಾನಿರದ ರಾಧೆಯ ಪರಿಸ್ಥಿತಿಯ ಅರಿವಿದ್ದೂ ಮೂಖವಾಗಿ ಮರೆಯಾದನೇ....??    
         
                  ......ಮಹಾಪ್ರವಾಹ.....ಮಹಾಪ್ರವಾಹ ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ..ತೊರೆದರು ತನ್ನ, ತೊರೆಯದು ಪ್ರಿಯನ ರಾಧೆಯ ಪ್ರೀತಿಯ ರೀತಿ..ಸಾಲುಗಳೇಕೋ ಮನದಲ್ಲಿ ಗುನುಗುನಿಸಿ ಮರೆಯಾಗಿತ್ತು,.ರಾಧೆಯ ಪ್ರೀತಿಯ ಪರಿ ಒಮ್ಮೆ ಹೊಟ್ಟೆಕಿಚ್ಚು ತರಿಸಿ ದೂರವಾಗಿತ್ತು.....ಕೊನೆಯದಾಗಿ ರಾಧೆಯ ನಿಶ್ಕಲ್ಮಶ ಪ್ರೀತಿಯ ಗಟ್ಟಿತನಕ್ಕೆ,ತ್ಯಾಗದ ಉದಾರತೆಗೆ,ಕೃಷ್ಣನ ಬರುವನ್ನೇ ಕಾಯುತ್ತಾ ಕುಳಿತಿರುವ ಅವಳುಸಿರಿನ ತಾಳ್ಮೆಗೆ ಮನಸ್ಸೊಮ್ಮೆ ಶ್ಲಾಗಿಸಿತ್ತು..........

Thursday, 19 November 2015

                                ಅವನೊಮ್ಮೆ ಹುಟ್ಟಿ ಬಂದಿದ್ದರೇ...!!

           
         
            ಆತ ಪರಮ ಸುಂದರನಂತೆ,ನಮ್ಮ ಉಸಿರು ಅಥವಾ ಪ್ರಾಣಾತ್ಮ ಅವನೇ ಆಗಿದ್ದಾನಂತೆ,ಸ್ತ್ರೀ ಲೋಲನಂತೆ ಆ ದೇವೋತ್ತಮ..ಆತ ನಮ್ಮೆಲ್ಲರಲ್ಲೂ ಬೆರೆತು ಹೋಗಿದ್ದಾನಂತೆ ಅವನನ್ನು ನಾವೇ ಕಂಡುಕೊಳ್ಳಬೇಕಂತೆ..!ಆತನೇ ಪ್ರತೀ ಜೀವಿಯ ಪರಮ ಗುರಿಯಂತೆ..ಅವನ ಭಕ್ತರಿಗೆ ಸೋಲೇ ಇಲ್ಲವಂತೆ ಹಾಗೆ ಅವನನ್ನರಿಯುವುದೂ ಅತೀ ಕಷ್ಟವಂತೆ.. ಅಷ್ಟೇ ಅಲ್ಲ ಬೃಂದಾವನದ ಗೋಪಿಯರು ಸಂಪೂರ್ಣವಾಗಿ ಇವನಿಗೆ ಶರಣಾಗಿದ್ದರಂತೆ,ಇವನ ಒಂದು ನೋಟ,ಮಾತು,ಪ್ರೀತಿಗಾಗಿ ನಿದ್ರಾಹಾರವಿಲ್ಲದೆ ಹಪಹಪಿಸುತ್ತಿದ್ದರಂತೆ.. ಅದೆಲ್ಲಾ ಜೀವಿಗಳ ಪರಮ ಪ್ರಭು "ಕೃಷ್ಣ " ನಂತೆ.... ಇನ್ನೂ ಏನೇನೋ....!!
               ಅದೆಷ್ಟೋ ಗೋಪಿಯರು ಕೃಷ್ಣನಿಗಾಗಿ ತಮ್ಮದೆಲ್ಲವನ್ನೂ ಧಾರೆ ಎರೆದು ಅವನಿಗಾಗಿ ವಿರಹ ತಾಳಿದ್ದರೆಂದರೇ ಅವನೆಷ್ಟು ಸುಂದರನಿದ್ದಿರಬಹುದು? ಸೋದರಮಾವ ಕಂಸನನ್ನು ಸದೆಬಡಿಯಲು ಮಥುರೆಗೆ ಹೋದಾಗ ಕುಬ್ಜೆಯಿಂದ ಕೇವಲ ಶ್ರೀಗಂಧವನ್ನು ಪಡೆದು,ಆಕೆಗೆ  ಅತಿಷಯವಾದ ಅಂದವನ್ನು ಕೊಟ್ಟಿದ್ದನೆಂದರೆ ಆತನೆಷ್ಟು ಕರುನಾಳುವಾಗಿರಬಹುದು?
Hmmm ಕೇವಲ ಅವನ ಹೆಸರನ್ನು ಜಪಿಸಿದರೆ ಸಾಕು ಮಹಾ ಪಾತಕಗಳೇ ನಾಶವಾಗುತ್ತೆ ಎಂದರೆ ಅವನ ನಾಮವೆಷ್ಟು ಪವಿತ್ರವಾಗಿರಬಹುದು..?ಮಹಾನ್ ರಾಕ್ಷಸರನ್ನೇ ಸಂಹರಿಸಿ ಮೆರೆದಿದ್ದನೆಂದರೇ ಆತನೆಷ್ಟು ಶಕ್ತಿಶಾಲಿ?ನಮ್ಮಂತಹ ಎಷ್ಟೋ ಜೀವಿಗಳ ವಿಶಿಷ್ಟ ಸೃಷ್ಟಿಯ ಮೂಲವೇ ಇವನು ಎಂದರೆ ನಿಜವಾಗಿ ಆಶ್ಚರ್ಯ ವೇ ಸರಿ,.ಈತನೆಷ್ಟು ಕ್ರಿಯಾಶೀಲನಾಗಿದ್ದಿರಬಹುದು? ?
        ಇದನ್ನೆಲ್ಲಾ ಕೇಳುತ್ತಿದ್ದರೆ ಅಥವಾ ಅವನ ಬಗೆಗೆ ಓದುತ್ತಿದ್ದಾಗಲೆಲ್ಲಾ ಅನೇಕ ಸಲ ಅನ್ನಿಸಿದ್ದಂತೂ ನಿಜ ಕೃಷ್ಣ ಮತ್ತೆ ಅವತರಿಸಬಹುದಿತ್ತಲ್ವಾ ಅಂತ....! ಈಗ ನೆಡೆಯುತ್ತಿರೋ ಘಟನೆಗಳೂ ಸಹ ನನ್ನ ಚಿಂತನೆಗೊಂದು ಕಾರಣ, ಸತ್ಯವಂತರಿಗಿದು ಕಾಲವಲ್ಲಯ್ಯಾ ಎಂಬಂತೆ ತನ್ನ ಸ್ವಾರ್ಥ ಸಾಧನೆಗೆ ಇತರರನ್ನು ಬಳಸಿಕೊಂಡು ಇತರರ ಕಾಲೆಳೆದು ಬದುಕುವ ಕಾಲವಿದು.. ನ್ಯಾಯ,ಸತ್ಯ,ಪ್ರಾಮಾಣಿಕತೆಯನ್ನು ಕಾಲಿನ ಕಸವಾಗಿಸಿ ಬದುಕು ಸಾಗಿಸುವವನಿಗಿಂದು ಕಾಲ,ತನ್ನದೆಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ತನ್ನಷ್ಟಕ್ಕೆ ತಾನು ಬದುಕು ಸಾಗಿಸುವವನಿಗೆ ಕಣ್ಣೀರು,ನೋವು,ನಿಂದೆ ಕಟ್ಟಿಟ್ಟ ಬುತ್ತಿ.. ಇವೆಲ್ಲಾ ಕ್ರೂರತನದ ಅಟ್ಟಹಾಸ ನಿಲ್ಲುವುದೆಂದು?ಪ್ರತಿಯೊಬ್ಬರಲ್ಲೂ ಉತ್ತಮತೆ ಮೂಡುವುದ್ಯಾವಾಗ??
              ಮತ್ತೆ ಅದೇ ನಿರೀಕ್ಷೆ ,ಅವನ ಕೊಳಲ ನಾದಕ್ಕೆ ನಮ್ಮೆಲ್ಲರನ್ನೂ ಸೆರೆಹಿಡಿದಿದ್ದರೇ,...!! ಒಮ್ಮೆ  ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ ಕೂತ ಅವನೊಮ್ಮೆ ಹೊರ ಬಂದಿದ್ದರೆ ಎಲ್ಲಾದಕ್ಕೂ ತಿಲಾಂಜಲಿ ಇಡಬಹುದಿತ್ತೋ ಏನೋ ಅಂತ....

Friday, 6 November 2015

                                                    Dreams V/S Reality....                                    
                       ಅದೆಷ್ಟೋ ವರ್ಷಗಳೇ ಕಳೆದು ಹೋಗಿವೆ.. ಒಂಟಿತನ ಈ ಜೀವಕ್ಕೆ permanent ಅನ್ಸಿಬಿಟ್ಟಿದೆ .. ಸಣ್ಣ ಪುಟ್ಟದ್ದಕ್ಕೂ ಕಣ್ಣೀರಿಡುವ ಹುಡುಗಿ ಈಗ practical life ಗೆ ಕಾಲಿರಿಸಿ ಬಹಳಾ ಕಾಲವಾಗಿತ್ತು.. ಎಲ್ಲಾ ನಿನ್ನ ಕೃಪೆ ಶರತ್ ಎಂದು ಹಣೆಗೆ ಬೊಟ್ಟಿಡುತ್ತಾ ಅವನ ನೆನಪು ತಂದುಕೊಂಡಳು ಸಂಧ್ಯಾ.... ಎಷ್ಟೆಲ್ಲಾ ನೋವು ಕೊಟ್ಟು ಬಿಟ್ಟಿದ್ದ ತನಗಾತ,. ಅಮ್ಮನಷ್ಟೇ ಇಷ್ಟ ಪಡುತ್ತಿದ್ದೆ ಅವನನ್ನು ಕಣ್ಣೀರು ಉಕ್ಕಳಿಸಿದರೂ ತಡೆದು ನಿಲ್ಲಿಸಿದ್ದಳು ಸಂಧ್ಯಾ.. ಪ್ರೀತಿಗೆ ಅರ್ಥ ಗೊತ್ತಿಲ್ಲದ ಒಂದು ಕಲ್ಲಿಗೇಕೆ ಅಳಲಿ? ?ತಿರಸ್ಕಾರದಿಂದ ಗಟ್ಟಿಯಾದರೂ ಮತ್ತದೇ  ನೆನಪು ಹಿಂಡಿ ಹಿಪ್ಪೆ ಮಾಡಿತ್ತು...                                                  
                        ಇವನ ರೀತಿಯೇ ಅಂದು ನಾನು ಕೂಡ practical ಆಗಿ think ಮಾಡಿದ್ದೇ ಆಗಿದ್ದರೆ ಈ ನೋವು ಇರುತ್ತಿರಲಿಲ್ಲವೇನೋ..!! ಸಂಬಂಧಗಳಿಗೆ,ಪ್ರೀತಿಗೆ ಬೆಲೆ ಕೊಡದೇ ನಾನು ಕೂಡ ಸ್ವಾರ್ಥ ಸಾಧಿಸಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ ಅನ್ಸುತ್ತೆ..  ಇದ್ದಕ್ಕಿದ್ದಂತೆ ಬದಲಾಗಿ ಹೋಗಿದ್ದ ಶರತ್.. !!                              

                'Be practical yar,why you getting soo emotional' ಸಂಧ್ಯಾ..??let it be.. ನನ್ನ ಆಸೆ ಬಿಟ್ಬಿಡು,ನಿನ್ನ lyf ಬಗ್ಗೆ ಗಮನ ಕೊಡು,.ನನಗೆ ನನ್ನ business ಮುಖ್ಯ..ಅದನ್ನು improve ಮಾಡ್ಬೇಕು,ಅದಾದ್ಮೇಲೆ ಬೇರೆ ಯೋಚ್ನೇ..ಹ್ಞಾ..ಆ ಬೇರೆ ಯೋಚನೆ ನೀನೆ ಆಗಿರ್ತೀಯ ಅಂತ ಅನ್ಕೋಬೇಡ,ನಿಮ್ಮನೇಲಿ ಯಾರನ್ನು ತೋರುಸ್ತಾರೋ ಅವರನನ್ನೇ ಮದುವೆ ಆಗ್ಬಿಡು..ಏನೋ ಹುಡುಗು ಬುದ್ಧಿ ಪ್ರೀತ್ಸಿದ್ದೆ......ಈಗ ಊಹ್ಞು  ಆಗದ ಮಾತು..?? ವ್ಯಂಗ್ಯವಾಗಿಯೇ ಮಾತು ಮುಗಿಸಿದ್ದ ಶರತ್. ಅಂದು ನಮ್ಮಿಬ್ಬರ  ಬದುಕು ಎನ್ನುತ್ತಿದ್ದ ಶರತ್ ಆ ಬದುಕನ್ನೇ ಇಬ್ಬಾಗವಾಗಿಸಿದ್ದ,.ಜೊತೆ ಬಾದುಕುವ ಕನಸನ್ನು ಹೊತ್ತಿದ್ದ ಕನಸನ್ನು ನುಚ್ಚು ನೂರಾಗಿಸಿದ್ದ.. ಕಾರಣವಿಲ್ಲದೇ ಪ್ರೀತಿಯನ್ನು ಕೊಂದಿದ್ದ..ಓದು ಮುಗಿದ ನಂತರ ಹಳ್ಳಿ ತೊರೆದ ಮೇಲೆ ಎಲ್ಲವನ್ನೂ ಮರೆತಿದ್ದ,. .  
           ಆ ಮುಖದಲ್ಲಿ 'ನಾನು' ಅನ್ನೋ ಸ್ವಾರ್ಥವನ್ನು ಬಿಟ್ಟರೆ ಪ್ರೀತಿ, ಕರುಣೆ,ಪ್ರಾಮಾಣಿಕತೆ ಅಕ್ಷರಶಃ ಶೂನ್ಯವಾಗಿತ್ತು....!!ಆತನನ್ನು    ಪ್ರೀತಿಸಿದ್ದ ತಪ್ಪಿಗೆ ದೊಡ್ಡ ಪಾಠವನ್ನು ಕಲಿತಾಗಿತ್ತು....     ಈಗಿದ್ದನ್ನೆಲ್ಲಾ ನೆನಪಿಸಿ ಏನಾಗುವುದಿದೆ Dn't get tooo emotional ಸಂಧ್ಯಾ,.let it be ತನಗೆ ತಾನೆ ಹೇಳಿಕೊಂಡಳು.,ಒಂದು ಕಾಲದಲ್ಲಿ ಶರತ್ ಹೇಳಿದ್ದ....!! ಜೀವನದಲ್ಲಿ ನಮ್ಮ ಜೊತೆ ಸ್ವಲ್ಪ ಕಾಲ ಜೊತೆ ಇದ್ದ ಪ್ರತಿಯೊಬ್ಬರೂ ಏನನ್ನಾದರೂ ನೀಡಿಯೇ ಹೋಗಿರುತ್ತಾರೆ.,ನೋವು ಅಥವಾ ಸಂತೋಷ,.ಯಾವುದೇ ಆಗಿರ್ಲೀ ಅದೊಂದು ಪಾಠ... ಜೀವನದಲ್ಲಿ ಕೆಲ ವ್ಯಕ್ತಿಗಳನ್ನ,ಕೆಲ ಸನ್ನಿವೇಶಗಳನ್ನ,ಕೆಲ ಮಾತುಗಳನ್ನ ಸುಲಭವಾಗಿ ಮರೆಯಲ್ಲಿಕ್ಕಾಗಲ್ಲ...!!  
                 ನೆನಪಿನ ನಾವೆಯಲ್ಲಿ ತೇಲುತ್ತಿದ್ದವಳಿಗೆ ಎಚ್ಚರಿಸಿದ್ದು ಅವಳ office cab ನ ಹಾರನ್ನಿನ ಸದ್ದು.. ನೆನಪುಗಳಿಗೆ ಸಂಜೆ ಸಿಗುವೆನೆಂದು bye bye ಮಾಡಿ ಗಾಡಿ ಹತ್ತಿ ಬದುಕಿನತ್ತ ಹೊರಟಿದ್ದಳು....
                                                                                                     -Akshatha H.S

Monday, 5 October 2015

                           
 "ಆತ್ಮಸಾಕ್ಷಿ "....
                ಅಪ್ಪನ ಜೇಬಿನಿಂದ ಐದು ರೂಪಾಯಿಯ ಒಂದು ನೋಟು ಮತ್ತು ಒಂದೆರಡು ರೂಪಾಯಿಯ ಚಿಲ್ಲರೆಯನ್ನು ಎಗರಿಸಿದ್ದ ಗಣೇಶನೇನೂ ಅಪ್ಪನೆದುರುರಿಗೆ ಸಿಕ್ಕಿಬಿದ್ದಿರಲಿಲ್ಲ..ಆದರೆ ಅದೇ  ಹಣವನ್ನು ಅಂಗಡಿಗೆ ಕೊಟ್ಟು ಬೊಂಬಾಯಿ ಮಿಠಾಯಿ ತಿಂದದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾನೆ.,ಅದೇನೋ ಹುಡುಗು ಬುದ್ದಿ  ತಪ್ಪು ಮಾಡಿಬಿಟ್ಟಿದ್ದಾನೆ.
ಈ ವಿಚಾರ ಅಂದೇ ಅವರಪ್ಪನಿಗೋ ಅವರಮ್ಮನಿಗೋ ಗೊತ್ತಾಗಿದ್ದರೇ ನಾಲ್ಕು ಬುದ್ದಿ ಮಾತು ಹೇಳಿಯೋ,ಎರಡು ಪೆಟ್ಟು ಕೊಟ್ಟೋ ಸರಿಮಾಡಬಹುದಿತ್ತು....ಆದರೇ ಅದು ಹಾಗಾಗಿರಲಿಲ್ಲ,.ಮೊದಲು ಅಪ್ಪನ ಜೇಬಿನಲ್ಲಿ ಕದಿಯುತ್ತಿದ್ದವನು ಬರುಬರುತ್ತಾ ಗೆಳೆಯರು,ನೆಂಟರಿಷ್ಟರು,ನೆರಹೊರೆಯವರೆನ್ನುತ್ತಾ ಎಲ್ಲರ ಮನೆಯಲ್ಲೂ ತನ್ನ ಚಾಳಿಯನ್ನು ಶುರುಮಾಡಿದ್ದ..
           ಅದೆಷ್ಟು ಚಾಲಾಕಿಯಾಗಿದ್ದನೆಂದರೇ ಅವನ ಆ ಕೆಟ್ಟ ಚಾಳಿ ಯಾರಿಗೂ ತಿಳಿಯುತ್ತಿರಲಿಲ್ಲ,.ಅವನ ಬಗೆಗೆ ಎಲ್ಲರಗೂ ಒಳ್ಳೆಯ ಅಭಿಪ್ರಾಯವೇ ಇತ್ತು,.ಯಾರೂ ಏನೂ ಇವನ ಬಗ್ಗೆ ಏನು ಗಮನಿದಿದ್ದರೂ ಆಗಾಗ ಅದೇನೋ ಭಾವನೆ ಅವನ ಆ ಕೆಟ್ಟ ಕದಿಯುವ ಚಾಳಿಯನ್ನು ಪ್ರತಿಭಟಿಸುತ್ತಿತ್ತು,ಒಮ್ಮೊಮ್ಮೆ ಚುಚ್ಚಿ ನಿನ್ನದು ತಪ್ಪು ಎಂದು ಸಾರಿಹೇಳುತ್ತಿತ್ತು ಅವನ "ಆತ್ಮಸಾಕ್ಷಿ" ಅವನೆಲ್ಲಾ  ಚಟುವಟಿಕೆಗಳಿಗೂ ಸಾಕ್ಷಿಯಾಗಿತ್ತು,.ಅದೆಷ್ಟು ಬಾರಿಯಾದರೂ ಇತರರ ಕಣ್ ತಪ್ಪಿಸಿ ತಪ್ಪುಗಳನ್ನು ಮಾಡಬಹುದು,ಆದರೆ ನಮ್ಮೊಳಗೇ ಇರುವ ಆತ್ಮಸಾಕ್ಷಿಯನ್ನು ಮರೆಮಾಡಿ ತಪ್ಪಿಸಿಕೊಳ್ಳಲಾದೀತೆ........??   ಖಂಡಿತಾ ಅಸಾಧ್ಯ.,ನಮ್ಮೊಳಗೇ ಅವಿತು ಕೂತಿರುವ ಆತ್ಮಸಾಕ್ಷಿಯನ್ನು ಮೂಲೆಗೊತ್ತಿ ಅವರವರಿಷ್ಟಕ್ಕೆ ತಪ್ಪು ಒಪ್ಪುಗಳನ್ನು ಮಾಡುತ್ತಾ ಕೂರಲು ಯಾರಿಗೂ ಸಾಧ್ಯ ಆಗುವುದಿಲ್ಲ.,ಇದು ಗಣೇಶನೊಬ್ಬನ ಕಥೆಯಲ್ಲ,ಅವನೊಂದು ಉದಾಹರಣೆಯಷ್ಟೇ....
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಪರಾಧಗಳನ್ನು ಎಚ್ಚರಿಸಲು ಅಪರಾಧಿ ಪ್ರಜ್ಞೆ ಕಾಡಿಯೇ ಕಾಡುತ್ತದೆ,. ನಮ್ಮ ನಡವಳಿಕೆಯನ್ನು ಬದಲಿಸಿಕೊಂಡು,ಸಕಾರಾತ್ಮಕವಾಗಿ ಜೀವನ ನೆಡೆಸಲು ಎಲ್ಲರಿಗೂ ಸಾಧ್ಯವಾಗುವಂತೆ ನಮ್ಮೊಳಗೇ ಶಕ್ತಿಗಳಿವೆ,ಅದನ್ನುಕಂಡುಕೊಳ್ಳಬೇಕಷ್ಟೆ......!!
              ನೀವು ರಸ್ತೆಯ ಮೂಲೆಯಲ್ಲಿ ನೆಡೆದು ಹೋಗುತ್ತಿರುತ್ತೀರಿ.,ಅಚಾನಕ್ಕಾಗಿ ಅಪಘಾತವನ್ನು ಕಣ್ಣಾರೆ ನೋಡುತ್ತೀರಿ,ಆ ಆಘಾತವನ್ನು ಮಾಡಿದವ ನಿಮ್ಮ ಪರಮಾಪ್ತ ಗೆಳೆಯನೇ ಆಗಿರುತ್ತಾನೆ,ಗ್ರಹಚಾರಕ್ಕೆ ನೀವೇ ಆ ಅಪಘಾತವನ್ನು ಹತ್ತಿರದಿಂದ ನೋಡಿದವರು.... ಅಂದೇ ಪೋಲೀಸರು ಮನೆಗೆ ಬಂದಿದ್ದಾರೆ ತನಿಖೆಗೆ.....!!ಪೇಚಾಟ ಶುರುವಾಯಿತು ತಕ್ಷಣ,. ಈ ಸನ್ನಿವೇಶ ನಿಮ್ಮನ್ನು ಯಾವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುತ್ತೆ...??ಒಂದು ಕಡೆ ನಿಮ್ಮ ಪರಮಾಪ್ತ ಸ್ನೇಹಿತ,ಇನ್ನೊಂದು ಬದಿಯಲ್ಲಿ ಅನ್ಯಾಯಕ್ಕೊಳಗಾದ ಜೀವ ಆಸ್ಪತ್ರೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿದೆ,. ಒಂದು ಸತ್ಯ-ಒಂದು ಸುಳ್ಳು              ಅಬ್ಬಬ್ಬಾ...!!ಈ ಘೋಜಲಾಮಯ ಸನ್ನಿವೇಶದಲ್ಲಿ ನಿಮ್ಮ ಆಯ್ಕೆ ಸತ್ಯದ ಕಡೆಯಾದರೇ ನಿಮ್ಮ ಸ್ನೇಹಿತ ದೂರವಾದ್ರೂ(ಆದರೂ ಆಗ್ಬೋದು,ನಿಶ್ಚಯವಾಗಿಯಲ್ಲ) ನಿಮಗೆ ಸಮಾಧಾನ ಸಿಗುತ್ತದೆ,ಅದೇ ಒಂದು ಸುಳ್ಳು ಜೀವನದ ಕೊನೆಯ ತನಕ ಕಾಡುತ್ತದೆ.... ಹೀಗೆ ಜೀವನದಲ್ಲಿ ನಮ್ಮ ಪ್ರತೀ ಆಯ್ಕೆ,ನಮ್ಮ ಪ್ರತೀ ನಿರ್ಧಾರ,ಪ್ರತೀ ನಡವಳಿಕೆಗಳು..... ನಮ್ಮ ಮೇಲೇ ನಿಂತಿದೆ.,ಎಲ್ಲರಿಗೂ ಮೆಚ್ಚುವಂತೆ ಬದುಕು ಸಾಗಿಸುವುದು ತುಂಬಾ ಕಷ್ಟ ..ಆದರೆ ನಮ್ಮ ಆತ್ಮ ಮೆಚ್ಚುವ ರೀತಿ ಬದುಕು ಸಾಗಿಸುವುದು ಅತಿ ಉತ್ತಮ....ಅದರಲ್ಲಿ ನಿಮ್ಮದಿಯೂ ಇರುತ್ತದೆ ಹಾಗೂ ಅದು ನಮಗೆ ಉತ್ತಮ ಹಾದಿಯಲ್ಲಿ ನೆಡೆಯುವಂತೆ ಮಾಡುತ್ತದೆ....So
           "Be the path of your soul or conscience "...

                                ಆಯ್ಕೆ......


        ಅದೆಷ್ಟೋ ಬಯಕೆಗಳು,ಅದೆಷ್ಟೋ ಕನಸುಗಳನ್ನು      ಈಡೇರಿಸಿಕೊಳ್ಳುವ ಕಾತರತೆ....  ಅವು ಈಡೇರದೇ ಇರುವಂಥಾದ್ದೇನಲ್ಲ...... ಆದ್ರೂ ಜವಾಬ್ದಾರಿ ಅದನ್ನು ಈಡೇರುವಂತೆ ಮಾಡುತ್ತಾ ಅನ್ನೊ confusion ..!!
                   ಜೀವನ ಅಂದ್ರೆ ಹಾಗೆ ಅಲ್ವಾ ಅದೆಷ್ಟೋ ಆಸೆಗಳು,ಕನಸುಗಳು ಚಿತ್ತಾರವನ್ನು ಬಿಡಿಸಿರುತ್ತೆ ಮನಸ್ಸಲ್ಲಿ,.
 ಅದೆಲ್ಲವುಗಳಲ್ಲಿ ಕೆಲವಷ್ಟು ಈಡೇರುತ್ವೆ,ಇನ್ನುಕೆಲವು ಸುಂದರ ಕನಸಿನ ಚಿತ್ತಾರನಳಾಗಿಯೇ ಕೂತಿರತ್ತೆ....ಆಯ್ಕೆಗಳನ್ನು ಪಕ್ಕದಲ್ಲಿರಿಸಿಕೊಂಡು ನಿರ್ಧಾರಕ್ಕೋಸ್ಕರ ಅಂಚಿ-ಪಿಂಚಿ ಹಾಕುತ್ತಾ ಕೂರುವ ಕಾಯಕ ಯಾರಿಗೂ ಬೇಡ ಅನ್ನಿ...!!
                 ಒಂದು ಕನಸು,ಒಂದು ಜವಾಭ್ದಾರಿ... ಇವೆರಡು ಏಕ ಮಾತ್ರದಲ್ಲಿ ಈಡೇರ್ಬೇಕು ಅಂದಾಗ ಆಯ್ಕೆ ಮಾಡುವುದು ಕಷ್ಟವೇ...ಆದ್ರೂ ಯಾವುದಾದ್ರೂ ಒಂದು ನಿರ್ಧಾರ ಆಗ್ಲೇ ಬೇಕು, ಕನಸಿನ ಸಮಾದಿಯೋ,ಇಲ್ಲವೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳೋದೋ..?? ಇವೆರಡರಲ್ಲಿ ಯಾವುದರ ಕೈ ಬಿಟ್ಟರೂ ಆತ್ಮಸಾಕ್ಷಿಗೆ ನೋವುಂಟು ಮಾಡಿದ ರೀತಿಯೇ....!!
ಕನಸುಗಳ ಕೈ ಹಿಡಿದು ಜವಾಬ್ದಾರಿಯನ್ನು ಕೈ ಹಿಡಿದೆವೆನ್ನಿ ಇದು ' ಸ್ವಾರ್ಥ'ವೆಂದೆನಿಸುತ್ತೆ..!!
           ಕನಸುಗಳನ್ನು ಬದಿಗೊತ್ತಿ ಜವಾಬ್ದಾರಿಯ ಕಡೆ ಕೈ ಚೆಲ್ಲಿದ್ದರೂ ಅದು ನಮ್ಮ ಮನಸ್ಸಿಗೆ,ಮನಸ್ಸಾಕ್ಷಿಗೆ ಮಾಡಿದ ಅಪಮಾನ,ಹಾಗೇ ಆ ನೋವು ಕೊನೆಯ ವರೆಗೂ ಉಳಿದುಬಿಡುತ್ತದೆ.....
ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ತುಂಬಾ ಪ್ರಮುಖವಾದುದು.,ನೋವು ಸಹಜ,.ಆದ್ರೆ ಆ ಜವಾಬ್ದಾರಿ ಮತ್ತು ಕನಸಿನ ನಡುವಿನ ನಮ್ಮ ಆಯ್ಕೆ ಸಾವಿರ ಬಾರಿ ಕೂತು ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿರಬೇಕು,. ಇಂತಹದೊಂದು ಗೋಜಲಾಮಯ ಸನ್ನಿವೇಶ ಪ್ರತಿಯೊಬ್ಬರ ಜೀವನದಲ್ಲೂ  ಬರತ್ತೆ.... ಈ ಸಂದರ್ಭದಲ್ಲಿ ನಾವು ಮಾಡುವ ಆಯ್ಕೆ ಸಂಪೂರ್ಣವಾಗಿ ನಮ್ಮನ್ನು ಬದಲಿಸುತ್ತೆ....... :)

                     Different style ನ ಜನ್ರಪ್ಪ,full difficult ಉ..!?


 

                             ಕೆಲಸದ ತಲೆಬಿಸಿಯನ್ನು ಮುಗಿಸಿ ಬಂದ ಜೀವ ಸಮಾಧಾನವೇ ಇಲ್ಲದಂತೆ ನರಳ್ತಿತ್ತು..ಮಾತು ಬೇಡ.  ಕಥೆ ಬೇಡ,ಯಾಕಾದ್ರೂ ಬೇಕಪ್ಪ ಈ Job ಸಹವಾಸ ಅರಾಮಾಗ್ ಮನೆಲಿರಣ ಅನ್ಸಿಬಿಡುತ್ತೆ.. ಅನ್ಸದಷ್ಟೆ, ಹ್ಞೂ.. ಈ ಹಾಳಾದ independency ಅನ್ನೋ ಪದ ಇದ್ಯಲ್ಲ ಅದು ನನ್ ಕೆಲ್ಸಕ್ ರಾಜೀನಾಮೆ ನೀಡಕ್ಕೂ ಬಿಡಲ್ಲ ಅನ್ನತ್ತೆ....
ಅದ್ ಬಿಡಿ ನನ್ ಮನ್ಸು ಈ Tension ಇಂದ free ಆಗ್ಬೇಕಲಾ,ಅದಕ್ಕಾಗಿ ಏನ್ ಮಾಡೋದಂತ ಅಲ್ಲಿಂದಿಲ್ಲಿಗೆ ಪುರ್ಸೊತ್ತಿಲ್ಲದೇ ಓಡಾಡ್ಡೆ,ಅಮ್ಮನಿಗೆ ಫೋನಾಯಿಸಿ ಒಂದಷ್ಟು ಹೊತ್ತು ಹಲಬ್ದೆ..whatsup,Facebook ಅಂತ open ಮಾಡಿದ್ರು ಊಹ್ಞೂ ಸಮಾಧಾನ ಇಲ್ಲ..ಇದು ಆಗದ ಮಾತು ಅನ್ಕೊಂಡು ಸುಮ್ನೆ ನನ್ mobile ಗೆ earphone ಚುಚ್ಚಿ  favorites ಗೆ ಹೋಗಿ ನೆಚ್ಚಿನ melodies ಗಳ್ನ ಕೇಳ್ತಾ,ಗುನುಗುನಿಸುತ್ತಾ ಕುಳ್ತೆ,. ಈಗ್ ಒಂದ್ ತರಹ relief ಆಯ್ತು ನೋಡಿ.. ಅಲ್ಲಿಯ ತನ್ಕ ಇದ್ದ ಕೆಟ್ಟ ಬೇಜಾರು,ಮನಸಿನ ಹೊಯ್ದಾಟ,.ಈಗ ತಕ್ಕ ಮಟ್ಟಿಗೆ ಕಡಿಮೆಯಾಗಿತ್ತು,.
         
             ನನ್ ಕಥೆ ಇಲ್ಲಿಗೆ ಮುಗೀತು ಅನ್ಕೊಳ್ಳಿ,ಯಾಕಂದ್ರೆ ಒಂದು ಫೋನು ಅದ್ರಲ್ಲಿ  Mp3 songs ಇದ್ಬಿಟ್ರೆ ಮುಗ್ದೇ ಹೋಯ್ತು.. ಯಾರ್ ಸುದ್ದಿ ಬೇಡ ಸುಕಾರ್ ಬೇಡ ನಾನೆ ದೊಡ್ಡ ಶ್ರೇಯಾ ಘೋಷಾಲ್ ಅನ್ಕೊಂಡು Songs ಕೇಳ್ತಾ ಹಾಡ್ತಾ ಕೂತ್ಬಿಡೋದು,.

           ನನ್ದೇನ್ Different style ಅಲ್ಲ ಬಿಡಿ,ಯಾಕಂದ್ರೆ  Almost ಜನಕ್ಕೆ Music ಅನ್ನೋದು ಒಂದ್ ತರ Passion ಆಗಿರತ್ತೆ.....ಹಾಗೇನೇ books ಓದ್ತಾರೆ,meditation ಮಾಡ್ತಾರೆ... ಹೀಗೆ ಸುಮಾರಷ್ಟು ಬಗೆ ಇದೆ ಮನ್ಸನ್ನ relaxation ಮಾಡ್ಕೊಳಕ್ಕೆ... ಆದ್ರೆ ನಾನ್ ಹೇಳಕ್ ಹೊರ್ಟಿರೋದು different style ನ ಹೇಗೆ ತಮ್ಮ ಮನ್ಸನ್ನ normal mood ಗೆ ತನ್ಕೊತಾರೆ ಅನ್ನೋದ್ರ ಬಗ..!!

      ''Please ನನ್ disturb ಮಾಡ್ಬೇಡ ಮೊದ್ಲೆ ನನ್ mood ಸರಿ ಇಲ್ಲ,.ಒಂದ್ ಸರಿ ಹೇಳಿದ್ ಅರ್ಥ ಆಗಲ್ವಾ,ಸುಮ್ನೆ ಬೈಸ್ಕೊಬೇಡ".... ಈ dialogue ಎಲ್ಲೋ ಕೇಳ್ದಂಗಿದೆ ಅನ್ಸಲ್ವಾ.? ಕೇಳೇ ಕೇಳಿರ್ತಿರಾ,. ತಮ್ಮ ಹಾಳಾಗಿರೋ ಮನ್ಸನ್ನ ಸರಿ ಮಾಡ್ಕೊಳಕ್ಕೆ ಈ ತರ ಬೇರೆಯವ್ರ mood ನ ಹಾಳ್ ಮಾಡೊ ಜನ different ಅಲ್ವಾ..??
ಇಷ್ಟೇ ಅಲ್ಲ ಎಲ್ಲಾ hurt ಮಾಡಿದ್ಮೇಲೆ  'Sry ನನ್ mood ಸರಿ ಇರ್ಲಿಲ್ಲ so ರೇಗ್ಬಿಟೆ ಅನ್ನೋ ಸಂತಾಪ ಸೂಚನೆ'...!!
     ಇನ್ನೇನ್ ಮಾಡೋದು ಪಾಪ ಮನ್ಸು ಸರಿ ಇಲ್ದೆ ರೇಗ್ಬಿಟ್ರು,. ಇದ್ರಿನ್ದನಾದ್ರು ಅವ್ರ mood ನೆಟ್ಟಗಾಯ್ತಲ್ಲಾ ಅನ್ನೋದೇ ಖುಷಿ,ಸ್ವಲ್ಪ ಸಮಯ ನಮಗವರ ಮಾತು ನೋವಾದ್ರೂ,ನಾವು ಅವರ ಹಾಳಾದ mood ನ ರಿಪೇರಿಗೆ ಕಾರಣಕರ್ಥರಾದೆವಲ್ಲ ಅನ್ನೋ ಹೆಮ್ಮೆ....ಇರೋದ್ರಲ್ಲೆ positive thinking ಮಾಡೋದು ಅಂದ್ರೆ ಇದೇನೇ..

             Anyways ನಾನ್ ಹೇಳ್ದೆ ಅಂತ ನಿಮ್ಮ್ ಬೇಜಾರ್ ಕಳ್ಯಕ್ಕೆ ಇದ್ದ ಬದ್ದವ್ರಿಗೆ hurt ಮಾಡೀರಾ..
ಒಳ್ಳೊಳ್ಳೆ hobbies ನ ರೂಡಿಸ್ಕೊಳ್ಳಿ ದಿನವೆಲ್ಲಾ ಮನ್ಸು ಖುಷಿಯಾಗಿರತ್ತೆ.. ಆದಷ್ಟು ನಗ್-ನಗ್ತಾ ಇರಿ ಒತ್ತಾಯಪೂರ್ವಕನಾದ್ರೂ ಆಗ depression ಇದ್ರೂ ಅಥವಾ ಮನ್ಸು ಹಾಳಾಗಿದ್ರೂ ಸ್ವಲ್ಪಮಟ್ಟಿಗೆ ನಿರಾಳ ಆಗತ್ತೆ..  ಯಾವುದೋ ಬೇಜಾರ್ಗೆ ಯಾರ್ನೋ ಬಲಿಪಶು ಮಾಡೋದು ತಪ್ಪಲ್ವಾ...??so ಒಳ್ಳೊಳ್ಳೆ  hobbies ನ ಬೆಳಸ್ಕೊಂಡು ಇಂಥ depression ಅಥವಾ  ಬೆರೆವ್ರಗೆ hurt ಮಾಡೊ ಎಡವಟ್ಟುಗಳಿಗೆ good bye ಹೇಳಣ........:)