Monday, 5 October 2015

                           
 "ಆತ್ಮಸಾಕ್ಷಿ "....
                ಅಪ್ಪನ ಜೇಬಿನಿಂದ ಐದು ರೂಪಾಯಿಯ ಒಂದು ನೋಟು ಮತ್ತು ಒಂದೆರಡು ರೂಪಾಯಿಯ ಚಿಲ್ಲರೆಯನ್ನು ಎಗರಿಸಿದ್ದ ಗಣೇಶನೇನೂ ಅಪ್ಪನೆದುರುರಿಗೆ ಸಿಕ್ಕಿಬಿದ್ದಿರಲಿಲ್ಲ..ಆದರೆ ಅದೇ  ಹಣವನ್ನು ಅಂಗಡಿಗೆ ಕೊಟ್ಟು ಬೊಂಬಾಯಿ ಮಿಠಾಯಿ ತಿಂದದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾನೆ.,ಅದೇನೋ ಹುಡುಗು ಬುದ್ದಿ  ತಪ್ಪು ಮಾಡಿಬಿಟ್ಟಿದ್ದಾನೆ.
ಈ ವಿಚಾರ ಅಂದೇ ಅವರಪ್ಪನಿಗೋ ಅವರಮ್ಮನಿಗೋ ಗೊತ್ತಾಗಿದ್ದರೇ ನಾಲ್ಕು ಬುದ್ದಿ ಮಾತು ಹೇಳಿಯೋ,ಎರಡು ಪೆಟ್ಟು ಕೊಟ್ಟೋ ಸರಿಮಾಡಬಹುದಿತ್ತು....ಆದರೇ ಅದು ಹಾಗಾಗಿರಲಿಲ್ಲ,.ಮೊದಲು ಅಪ್ಪನ ಜೇಬಿನಲ್ಲಿ ಕದಿಯುತ್ತಿದ್ದವನು ಬರುಬರುತ್ತಾ ಗೆಳೆಯರು,ನೆಂಟರಿಷ್ಟರು,ನೆರಹೊರೆಯವರೆನ್ನುತ್ತಾ ಎಲ್ಲರ ಮನೆಯಲ್ಲೂ ತನ್ನ ಚಾಳಿಯನ್ನು ಶುರುಮಾಡಿದ್ದ..
           ಅದೆಷ್ಟು ಚಾಲಾಕಿಯಾಗಿದ್ದನೆಂದರೇ ಅವನ ಆ ಕೆಟ್ಟ ಚಾಳಿ ಯಾರಿಗೂ ತಿಳಿಯುತ್ತಿರಲಿಲ್ಲ,.ಅವನ ಬಗೆಗೆ ಎಲ್ಲರಗೂ ಒಳ್ಳೆಯ ಅಭಿಪ್ರಾಯವೇ ಇತ್ತು,.ಯಾರೂ ಏನೂ ಇವನ ಬಗ್ಗೆ ಏನು ಗಮನಿದಿದ್ದರೂ ಆಗಾಗ ಅದೇನೋ ಭಾವನೆ ಅವನ ಆ ಕೆಟ್ಟ ಕದಿಯುವ ಚಾಳಿಯನ್ನು ಪ್ರತಿಭಟಿಸುತ್ತಿತ್ತು,ಒಮ್ಮೊಮ್ಮೆ ಚುಚ್ಚಿ ನಿನ್ನದು ತಪ್ಪು ಎಂದು ಸಾರಿಹೇಳುತ್ತಿತ್ತು ಅವನ "ಆತ್ಮಸಾಕ್ಷಿ" ಅವನೆಲ್ಲಾ  ಚಟುವಟಿಕೆಗಳಿಗೂ ಸಾಕ್ಷಿಯಾಗಿತ್ತು,.ಅದೆಷ್ಟು ಬಾರಿಯಾದರೂ ಇತರರ ಕಣ್ ತಪ್ಪಿಸಿ ತಪ್ಪುಗಳನ್ನು ಮಾಡಬಹುದು,ಆದರೆ ನಮ್ಮೊಳಗೇ ಇರುವ ಆತ್ಮಸಾಕ್ಷಿಯನ್ನು ಮರೆಮಾಡಿ ತಪ್ಪಿಸಿಕೊಳ್ಳಲಾದೀತೆ........??   ಖಂಡಿತಾ ಅಸಾಧ್ಯ.,ನಮ್ಮೊಳಗೇ ಅವಿತು ಕೂತಿರುವ ಆತ್ಮಸಾಕ್ಷಿಯನ್ನು ಮೂಲೆಗೊತ್ತಿ ಅವರವರಿಷ್ಟಕ್ಕೆ ತಪ್ಪು ಒಪ್ಪುಗಳನ್ನು ಮಾಡುತ್ತಾ ಕೂರಲು ಯಾರಿಗೂ ಸಾಧ್ಯ ಆಗುವುದಿಲ್ಲ.,ಇದು ಗಣೇಶನೊಬ್ಬನ ಕಥೆಯಲ್ಲ,ಅವನೊಂದು ಉದಾಹರಣೆಯಷ್ಟೇ....
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಪರಾಧಗಳನ್ನು ಎಚ್ಚರಿಸಲು ಅಪರಾಧಿ ಪ್ರಜ್ಞೆ ಕಾಡಿಯೇ ಕಾಡುತ್ತದೆ,. ನಮ್ಮ ನಡವಳಿಕೆಯನ್ನು ಬದಲಿಸಿಕೊಂಡು,ಸಕಾರಾತ್ಮಕವಾಗಿ ಜೀವನ ನೆಡೆಸಲು ಎಲ್ಲರಿಗೂ ಸಾಧ್ಯವಾಗುವಂತೆ ನಮ್ಮೊಳಗೇ ಶಕ್ತಿಗಳಿವೆ,ಅದನ್ನುಕಂಡುಕೊಳ್ಳಬೇಕಷ್ಟೆ......!!
              ನೀವು ರಸ್ತೆಯ ಮೂಲೆಯಲ್ಲಿ ನೆಡೆದು ಹೋಗುತ್ತಿರುತ್ತೀರಿ.,ಅಚಾನಕ್ಕಾಗಿ ಅಪಘಾತವನ್ನು ಕಣ್ಣಾರೆ ನೋಡುತ್ತೀರಿ,ಆ ಆಘಾತವನ್ನು ಮಾಡಿದವ ನಿಮ್ಮ ಪರಮಾಪ್ತ ಗೆಳೆಯನೇ ಆಗಿರುತ್ತಾನೆ,ಗ್ರಹಚಾರಕ್ಕೆ ನೀವೇ ಆ ಅಪಘಾತವನ್ನು ಹತ್ತಿರದಿಂದ ನೋಡಿದವರು.... ಅಂದೇ ಪೋಲೀಸರು ಮನೆಗೆ ಬಂದಿದ್ದಾರೆ ತನಿಖೆಗೆ.....!!ಪೇಚಾಟ ಶುರುವಾಯಿತು ತಕ್ಷಣ,. ಈ ಸನ್ನಿವೇಶ ನಿಮ್ಮನ್ನು ಯಾವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುತ್ತೆ...??ಒಂದು ಕಡೆ ನಿಮ್ಮ ಪರಮಾಪ್ತ ಸ್ನೇಹಿತ,ಇನ್ನೊಂದು ಬದಿಯಲ್ಲಿ ಅನ್ಯಾಯಕ್ಕೊಳಗಾದ ಜೀವ ಆಸ್ಪತ್ರೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿದೆ,. ಒಂದು ಸತ್ಯ-ಒಂದು ಸುಳ್ಳು              ಅಬ್ಬಬ್ಬಾ...!!ಈ ಘೋಜಲಾಮಯ ಸನ್ನಿವೇಶದಲ್ಲಿ ನಿಮ್ಮ ಆಯ್ಕೆ ಸತ್ಯದ ಕಡೆಯಾದರೇ ನಿಮ್ಮ ಸ್ನೇಹಿತ ದೂರವಾದ್ರೂ(ಆದರೂ ಆಗ್ಬೋದು,ನಿಶ್ಚಯವಾಗಿಯಲ್ಲ) ನಿಮಗೆ ಸಮಾಧಾನ ಸಿಗುತ್ತದೆ,ಅದೇ ಒಂದು ಸುಳ್ಳು ಜೀವನದ ಕೊನೆಯ ತನಕ ಕಾಡುತ್ತದೆ.... ಹೀಗೆ ಜೀವನದಲ್ಲಿ ನಮ್ಮ ಪ್ರತೀ ಆಯ್ಕೆ,ನಮ್ಮ ಪ್ರತೀ ನಿರ್ಧಾರ,ಪ್ರತೀ ನಡವಳಿಕೆಗಳು..... ನಮ್ಮ ಮೇಲೇ ನಿಂತಿದೆ.,ಎಲ್ಲರಿಗೂ ಮೆಚ್ಚುವಂತೆ ಬದುಕು ಸಾಗಿಸುವುದು ತುಂಬಾ ಕಷ್ಟ ..ಆದರೆ ನಮ್ಮ ಆತ್ಮ ಮೆಚ್ಚುವ ರೀತಿ ಬದುಕು ಸಾಗಿಸುವುದು ಅತಿ ಉತ್ತಮ....ಅದರಲ್ಲಿ ನಿಮ್ಮದಿಯೂ ಇರುತ್ತದೆ ಹಾಗೂ ಅದು ನಮಗೆ ಉತ್ತಮ ಹಾದಿಯಲ್ಲಿ ನೆಡೆಯುವಂತೆ ಮಾಡುತ್ತದೆ....So
           "Be the path of your soul or conscience "...

No comments:

Post a Comment