ಆಯ್ಕೆ......
ಅದೆಷ್ಟೋ ಬಯಕೆಗಳು,ಅದೆಷ್ಟೋ ಕನಸುಗಳನ್ನು ಈಡೇರಿಸಿಕೊಳ್ಳುವ ಕಾತರತೆ.... ಅವು ಈಡೇರದೇ ಇರುವಂಥಾದ್ದೇನಲ್ಲ...... ಆದ್ರೂ ಜವಾಬ್ದಾರಿ ಅದನ್ನು ಈಡೇರುವಂತೆ ಮಾಡುತ್ತಾ ಅನ್ನೊ confusion ..!!
ಜೀವನ ಅಂದ್ರೆ ಹಾಗೆ ಅಲ್ವಾ ಅದೆಷ್ಟೋ ಆಸೆಗಳು,ಕನಸುಗಳು ಚಿತ್ತಾರವನ್ನು ಬಿಡಿಸಿರುತ್ತೆ ಮನಸ್ಸಲ್ಲಿ,.
ಅದೆಲ್ಲವುಗಳಲ್ಲಿ ಕೆಲವಷ್ಟು ಈಡೇರುತ್ವೆ,ಇನ್ನುಕೆಲವು ಸುಂದರ ಕನಸಿನ ಚಿತ್ತಾರನಳಾಗಿಯೇ ಕೂತಿರತ್ತೆ....ಆಯ್ಕೆಗಳನ್ನು ಪಕ್ಕದಲ್ಲಿರಿಸಿಕೊಂಡು ನಿರ್ಧಾರಕ್ಕೋಸ್ಕರ ಅಂಚಿ-ಪಿಂಚಿ ಹಾಕುತ್ತಾ ಕೂರುವ ಕಾಯಕ ಯಾರಿಗೂ ಬೇಡ ಅನ್ನಿ...!!
ಒಂದು ಕನಸು,ಒಂದು ಜವಾಭ್ದಾರಿ... ಇವೆರಡು ಏಕ ಮಾತ್ರದಲ್ಲಿ ಈಡೇರ್ಬೇಕು ಅಂದಾಗ ಆಯ್ಕೆ ಮಾಡುವುದು ಕಷ್ಟವೇ...ಆದ್ರೂ ಯಾವುದಾದ್ರೂ ಒಂದು ನಿರ್ಧಾರ ಆಗ್ಲೇ ಬೇಕು, ಕನಸಿನ ಸಮಾದಿಯೋ,ಇಲ್ಲವೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳೋದೋ..?? ಇವೆರಡರಲ್ಲಿ ಯಾವುದರ ಕೈ ಬಿಟ್ಟರೂ ಆತ್ಮಸಾಕ್ಷಿಗೆ ನೋವುಂಟು ಮಾಡಿದ ರೀತಿಯೇ....!!
ಕನಸುಗಳ ಕೈ ಹಿಡಿದು ಜವಾಬ್ದಾರಿಯನ್ನು ಕೈ ಹಿಡಿದೆವೆನ್ನಿ ಇದು ' ಸ್ವಾರ್ಥ'ವೆಂದೆನಿಸುತ್ತೆ..!!
ಕನಸುಗಳನ್ನು ಬದಿಗೊತ್ತಿ ಜವಾಬ್ದಾರಿಯ ಕಡೆ ಕೈ ಚೆಲ್ಲಿದ್ದರೂ ಅದು ನಮ್ಮ ಮನಸ್ಸಿಗೆ,ಮನಸ್ಸಾಕ್ಷಿಗೆ ಮಾಡಿದ ಅಪಮಾನ,ಹಾಗೇ ಆ ನೋವು ಕೊನೆಯ ವರೆಗೂ ಉಳಿದುಬಿಡುತ್ತದೆ.....
ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ತುಂಬಾ ಪ್ರಮುಖವಾದುದು.,ನೋವು ಸಹಜ,.ಆದ್ರೆ ಆ ಜವಾಬ್ದಾರಿ ಮತ್ತು ಕನಸಿನ ನಡುವಿನ ನಮ್ಮ ಆಯ್ಕೆ ಸಾವಿರ ಬಾರಿ ಕೂತು ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿರಬೇಕು,. ಇಂತಹದೊಂದು ಗೋಜಲಾಮಯ ಸನ್ನಿವೇಶ ಪ್ರತಿಯೊಬ್ಬರ ಜೀವನದಲ್ಲೂ ಬರತ್ತೆ.... ಈ ಸಂದರ್ಭದಲ್ಲಿ ನಾವು ಮಾಡುವ ಆಯ್ಕೆ ಸಂಪೂರ್ಣವಾಗಿ ನಮ್ಮನ್ನು ಬದಲಿಸುತ್ತೆ....... :)

No comments:
Post a Comment