ಯಾವ ಮೋಹನ ಮುರಳಿ ಕರೆಯಿತು….
ತಾನು ತನ್ನತನ ಎಂಬ ಆಳ ಸಾಗರದೊಳಗೆ ಹೊಕ್ಕಿಯಾಗಿದೆ..,
ದೂರ ತೀರದಲ್ಲಿ ಮುರಳಿಯ ನಾದ ಹಿತವೆನಿಸಿದರೂ 'ತನ್ನ'
ಮಹಾಸಾಗರವನ್ನು ಬಿಟ್ಟು ಹೊರಬರಲಾಗುತ್ತಿಲ್ಲ ,. ಹೊರಬರಲಾಗುತ್ತಿಲ್ಲ ಎನ್ನುವುದಕ್ಕಿಂತ ಪ್ರಯತ್ನಿಸುತ್ತಿಲ್ಲ....!
......ತನ್ನ ಮಹಾಸಾಗರ...
ಅದರಲ್ಲಿ ತಾನು,ತನ್ನವರು,
ಜೊತೆಗೆ ತನ್ನದೇ ಆದ ಗುರಿಗಳು,ಬಯಕೆಗಳು,ಬೆಟ್ಟದಷ್ಟು,ಕನಸುಗಳು ಅದೆಷ್ಟರ ಮಟ್ಟಿಗೆ ಈಡೇರುತ್ತದೋ,ನಿರೀಕ್ಷೆಗಳು ಎಷ್ಟರ ಮಟ್ಟಿಗೆ ನೆರವೇರುವುದೋ ಯಾರೂ ಊಹಿಸಲಾರರು.... ಬರಿಯ ಮೂಳೆ-ಮಾಂಸದ ದೇಹದೊಳಗೆ ಉಸಿರಾಟದಿಂದಷ್ಟೇ ಅಸ್ತಿತ್ವವಿದೆ....
ನಾನು-ನನ್ನದು ಎಂಬ ಆತನ ಅಸ್ತಿತ್ವ ಇರುವುದು ಆತನ ಪ್ರಾಣದಲ್ಲಿಯಷ್ಟೇ.,ಆತನ ಅಸ್ಥಿತ್ವದ ಕುರುಹಾಗಿರುವ ಆತನ ಉಸಿರೇ ಇಲ್ಲವಾದಾಗ ಅವನ ಕನಸುಗಳೆಲ್ಲಿ,ನಿರೀಕ್ಷೆಗಳೆಲ್ಲಿ,ತಾನು ತನ್ನದೂ ಎಂಬ ಒಣಪ್ರತಿಷ್ಟೆಗಳೆಲ್ಲಿ ಉಳಿದಾವು?
?
ಜೀವನದಲ್ಲಿ ಮನುಷ್ಯ ಸುಖಕ್ಕಾಗಿಯಷ್ಟೇ ಪರಿತಪಿಸುತ್ತಾನೆ., ತನ್ನ ಹಿತಕ್ಕಾಗಿ ಏನನ್ನಾದರೂ ಮಾಡಬಲ್ಲ.,
ನಾಲ್ಕು ದಿನದ ಈ ಬದುಕಿಗೆ ಏನಾದರೂ ಮಾಡಬಲ್ಲ., ತನ್ನ ಬದುಕನ್ನು ಕೇವಲ ತನ್ನ ಕನಸುಗಳ,ಬಯಕೆಗಳ ತೃಪ್ತಿಗಾಗಿಯಷ್ಟೇ ಸೀಮಿತಗೊಳಿಸುತ್ತಾನೆ....ತನ್ನ ನಶಿಸುವ ದೇಹಕ್ಕಾಗಿ ದುಡಿದು ಹಣ್ಣಾಗಿರುತ್ತಾನೆ, ಅದೆಷ್ಟರ ಮಟ್ಟಿಗೆ ಎಂದರೇ ತನ್ನ ಜಗತ್ತಿನಿಂದ ಹೊರಬರಲೂ ಸಾಧ್ಯವಾಗದ ಸ್ಥಿತಿಗೆ ಬಂದಿರುತ್ತಾನೆ ತನ್ನ ಭವ ಸಾಗರದ ಆಳದಲ್ಲಿ ಹೊಕ್ಕವನಿಗೆ ಇನ್ನೊಂದು ಸುಪ್ತ ಅಲೌಕಿಕ ಲೋಕದ ಸೌಂದರ್ಯದ ಸ್ವಾದವನ್ನು ಆಘ್ರಾಣಿಸುವ ವ್ಯವದಾನ ಅಥವಾ ಸಮಯವಂತೂ ಇರುವುದಿಲ್ಲ....
ತನ್ನ ಬಯಕೆಗಳಿಗೆ,ತನ್ನ ಕನಸುಗಳಿಗಷ್ಟೇ ತನ್ನ ಪ್ರಂಪಂಚದಲ್ಲಿ ಬೇಲಿ ಹಾಕಿಕೊಂಡು ಬದುಕುವ ಬರಾಟೆಯಲ್ಲಿರುತ್ತಾನೆ.... ಅದಕ್ಕೆ ಕೊನೆ ಎಂದೋ ಶುರುವೆಂದೋ.....
ತನಗಾಗಿ, ತನ್ನ ಸ್ವಾರ್ಥಕ್ಕಾಗಿ ಹಾಕಿಕೊಂಡ ಬೇಲಿ ಒಂದು ದಿನ ತಾನಾಗೇ ಕಳಚಿ ಬೀಳುತ್ತದೆ ಎಂಬುದು ಅರಿವಿದ್ದರೂ ಬಿಡದ ನಿರೀಕ್ಷೆ...!
ತನ್ನದಲ್ಲದರ ಬಗ್ಗೆ ಅತಿಯಾದ ವ್ಯಾಮೋಹ.,ಬಿಡದ ಹುಚ್ಚು, ಸುಪ್ತಪ್ರಜ್ಞೆಯಲ್ಲಿ ತನ್ನನ್ನು ಯಾವಾಗಲೂ ಕೈ ಬೀಸಿ ಕರೆಯುತ್ತಾ
ಜಾಗೃತಗೊಳಿಸುವ ಆಧ್ಯಾತ್ಮಿಕ ಶಕ್ತಿಯ
ಶಾಶ್ವತ ಸುಖದತ್ತ ಹೊರಳಲು ಮನಸ್ಸು ಹಿಂಜರೆಯುತ್ತದೆ..
ಜೀವನದ ಸಣ್ಣ ಪುಟ್ಟ ಕನಸುಗಳ ಅಥವಾ ಗುರಿಯ ಈಡೇರಿಕೆಯನ್ನೇ ಮಹಾನ್ ಸಾಧನೆಯೆಂಬಂತೆ ಬೀಗುತ್ತಾನೆ.. ಆದರೆ ಇದಕ್ಕೂ ಮಿಗಿಲಾದ ಆಧ್ಯಾತ್ಮಿಕ ಸುಖ ತೀರದಾಚೆ ಕೈ ಬೀಸಿ ಕರೆಯುತ್ತಿದೆ.,ಮನುಷ್ಯನ ನಿಜವಾದ ಸುಖವಿರುವುದು ಆಧ್ಯಾತ್ಮಿಕ ಸಾಧನೆಯಲ್ಲಿ....!
ಇರುವುದೆಲ್ಲವನ್ನೂ ಬದಿಗೊತ್ತಿ ಇರದಿರುವ ಅಥವಾ ಶಾಶ್ವತ ವಲ್ಲದ ಬೌತಿಕ ಜಗತ್ತಿನ ಸಂಬಂಧಗಳಿಗಾಗಿ,ಬೌತಿಕ ವಸ್ತುಗಳಿಗಾಗಿ ಕೊನೆಗೆ ನಮ್ಮ ಬೌತಿಕ ದೇಹದ ಸುಖಕ್ಕಾಗಿ ದಿನಬೆಳಗಾದರೇ ಹೆಣಗುತ್ತಲೇ ಇರುತ್ತಾನೆ.,ನಾನು ನನ್ನದೆಂಬ ಬಂಧನದಾಚೆಗಿನ ಸುಪ್ತ ಸಮುದ್ರವನ್ನು ಸೇರಬೇಕೆನ್ನುವ ಆಸೆ ಅಥವಾ ಬಯಕೆ ಅದು ಅಂತಿಮ ಘಟ್ಟ.,..
ಅಧ್ಯಾತ್ಮಿಕ ಸಾಗರದೆಡೆ ದೂರದಿಂದೆಲ್ಲೋ ಕೂಗಿ ಕರೆಯುತ್ತಿರುವ ಮುರಳಿಯ ಕರೆಗೆ ' ಓ ಎನ್ನಬೇಕಿದೆ'.. ಒಮ್ಮೆ ಆ ನಾದಕ್ಕೆ ಸೋತರೇ ಇನ್ನೆಂದಿಗೂ ಯಾವುದಕ್ಕೂ ಸೋಲಲಾರರು,ಒಮ್ಮೆ ಆ ನಾದವನ್ನು ಅರಸಿ ಅಲ್ಲಿ ತಲುಪಿದ್ದೆ ಆದರೆ ಮತ್ತೆಂದು ಹಿಂದಕ್ಕೆ ಬರಲಾರಿರಿ,. ಆ ಮೋಹಕ ಆಧ್ಯಾತ್ಮಿಕ ಧ್ವನಿಯ ಶಕ್ತಿಯ ಸುಖ ಎಂದಿಗೂ ನಾಶವಾಗಲಾರದು.... “ಯಾವ ಮೋಹನ ಮುರಳಿಯ ಕರೆಯೋ”....”ಯಾವ ಬೃಂದಾವನದ ಸೆಳೆತವೋ”....ಕೊನೆಗೆ ಶಾಶ್ವತ ಸುಖದತ್ತ ಕೊಂಡೊಯ್ದಿತ್ತು......

Thanks for sharing such great information
ReplyDeleteAll your graphical need is here
Visit for wedding graphics, shubh vivah logo
Traditional graphics, sarva siksha abhiyan logo
Cliparts, Logo
Graphical Resources, Traditional Motifs
All your DTP needs